alex Certify ರಿಲೀಸ್​ ಆದ ಮೂರೇ ದಿನದಲ್ಲಿ ₹ 500 ಕೋಟಿ ಬಾಚಿದ RRR | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲೀಸ್​ ಆದ ಮೂರೇ ದಿನದಲ್ಲಿ ₹ 500 ಕೋಟಿ ಬಾಚಿದ RRR

ಎಸ್​.ಎಸ್.​ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಬಾಕ್ಸಾಫೀಸಿನಲ್ಲಿ ಕಲೆಕ್ಷನ್​ ಮಾಡುತ್ತಿದೆ. ಸಿನಿಮಾ ರಿಲೀಸ್​ ಆದ ಕೇವಲ ಮೂರು ದಿನಗಳಲ್ಲಿ ವಿಶ್ವಾದ್ಯಂತ ಈ ಸಿನಿಮಾವು 500 ಕೋಟಿ ರೂಪಾಯಿಗಳನ್ನು ದೋಚಿದೆ. ಈ ಮೂಲಕ ಈ ಸಿನಿಮಾವು ಹೊಸ ಟ್ರೇಡ್​ ಮಾರ್ಕ್​ನ್ನೇ ಸೆಟ್​ ಮಾಡಿದಂತಾಗಿದೆ. ಅಲ್ಲದೇ ಈ ಸಿನಿಮಾವು ಶೀಘ್ರದಲ್ಲಿಯೆ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಬಹುದು ಎಂದು ನಿರೀಕ್ಷಿಸಲಾಗಿದೆ.

RRR ಆ್ಯಕ್ಷನ್​ ಎಂಟರ್​ಟೈನರ್​ ಸಿನಿಮಾ ಆಗಿದ್ದು, ಜಗತ್ತಿನೆಲ್ಲೆಡೆ ಸಾವಿರಾರು ಸ್ಕ್ರೀನ್​ಗಳಲ್ಲಿ ಬಹು ಭಾಷೆಗಳಲ್ಲಿ ತೆರೆ ಕಂಡಿದೆ. ಕೋವಿಡ್ ಕಾರಣದಿಂದಾಗಿ ಸಾಕಷ್ಟು ಬಾರಿ ಮುಂದೂಡಲ್ಪಟ್ಟಿದ್ದ ಈ ಸಿನಿಮಾ ಮಾರ್ಚ್​ 25ರಿಂದ ವಿಶ್ವಾದ್ಯಂತ ಥಿಯೇಟರ್​ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಟ್ವಿಟರ್‌ನಲ್ಲಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗಳನ್ನು ಗಳಿಸಿದೆ ಮತ್ತು ಸಿನೆಮಾ ಇನ್ನೂ ನಾಗಾಲೋಟದಲ್ಲಿ ಸಾಗುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...