
ತನ್ನ ಗಾಯನದ ಮೂಲಕ ತೀರ್ಪುಗಾರರನ್ನು ಆಕರ್ಷಿಸಿದ ತೆಲುಗು ಇಂಡಿಯನ್ ಐಡಲ್ ಸ್ಪರ್ಧಿ ರೇಣು ಕುಮಾರ್, ತಾಯಂದಿರ ದಿನದ ನೆನಪಿಗಾಗಿ ವೇದಿಕೆಗೆ ಅವರ ತಾಯಿಯನ್ನು ಕರೆದೊಯ್ದರು. ಈ ವೇಳೆ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ತಾನು ಹೆಣಗಾಡಿದ್ದೇನೆ ಮತ್ತು ತನ್ನ ಮಗನ ಶಿಕ್ಷಣವನ್ನು ಸಹ ಭರಿಸಲಾಗಲಿಲ್ಲ ಎಂದು ರೇಣು ಕುಮಾರ್ ವೇದಿಕೆಯಲ್ಲಿ ಹೇಳುತ್ತಾ ಕಣ್ಣೀರು ಹಾಕಿದ್ರು.
ಥಮನ್ ಕೂಡ ಬಹಳ ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ. ಅವರು ಚಿಕ್ಕವಯಸ್ಸಿನಲ್ಲಿ ತನ್ನ ಕುಟುಂಬವನ್ನು ಪೋಷಿಸಲು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಗಿ ಬಂದಿತ್ತು. ಇದೇ ರೀತಿ ರೇಣು ಕುಮಾರ್ ಅವರ ಪರಿಸ್ಥಿತಿಯನ್ನು ಕಂಡು ಅವರು ಮನನೊಂದಿದ್ದರು. ಹೀಗಾಗಿ ಅವರ ಪುತ್ರನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಥಮನ್ ಹೊತ್ತುಕೊಂಡಿದ್ದಾರೆ. ತೀರ್ಪುಗಾರರಾದ ನಿತ್ಯಾ ಮೆನೆನ್ ಮತ್ತು ಕಾರ್ತಿಕ್ ಅವರು ಥಮನ್ ಅವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.