ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮಹಿಳೆಯರು ಪುರುಷರಿಗಿಂತ ತಾವೇನು ಕಮ್ಮಿಯಿಲ್ಲ ಎಂಬಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದೀಗ ಯುನಿಕಾರ್ನ್ ಸ್ಟಾರ್ಟ್ಅಪ್ ನೋ ಬ್ರೋಕರ್ ಸಂಸ್ಥೆಯು 9,000 ಮಹಿಳೆಯರ ಸಮೀಕ್ಷೆ ನಡೆಸಿದ್ದು, ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ.
ಸಮೀಕ್ಷೆಯ ಪ್ರಕಾರ, ಸುಮಾರು 70 ಶೇಕಡಾದಷ್ಟು ಮಹಿಳೆಯರು ರಿಯಲ್ ಎಸ್ಟೇಟ್ನಲ್ಲಿ ಮುಖ್ಯವಾಗಿ ವಸತಿ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ ಎಂಬುದು ತಿಳಿದು ಬಂದಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಪ್ರಾಪ್ಟೆಕ್ ನೋಬ್ರೋಕರ್ ಹೂಡಿಕೆದಾರರಿಂದ ಯುಎಸ್ ಡಾಲರ್ 1 ಶತಕೋಟಿ ಮೌಲ್ಯಗಳಲ್ಲಿ ಯುಎಸ್ ಡಾಲರ್ 210 ಮಿಲಿಯನ್ ಸಂಗ್ರಹಿಸಿದೆ. ಇದು ಬಾಡಿಗೆ, ಖರೀದಿ, ಮನೆ ಸೇವೆಗಳು, ಹಣಕಾಸು ಸೇವೆಗಳು ಮತ್ತು ಸಮಾಜದ ನಿರ್ವಹಣೆಯಂತಹ ಎಲ್ಲಾ ಆಸ್ತಿ-ಸಂಬಂಧಿತ ಅಗತ್ಯಗಳನ್ನು ಪೂರೈಸುತ್ತದೆ.
ಇನ್ನು ಶೇ.69 ರಷ್ಟು ಮಹಿಳೆಯರು ಚಿನ್ನ, ಎಸ್‌ಐಪಿ/ಸ್ಟಾಕ್‌ಗಳು ಮತ್ತು ಐಷಾರಾಮಿ ಫ್ಯಾಷನ್‌ಗೆ ಹೋಲಿಸಿದರೆ ಆಸ್ತಿಯಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ದೆಹಲಿ-ಎನ್‌ಸಿಆರ್, ಹೈದರಾಬಾದ್, ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಪುಣೆಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇ. 94ರಷ್ಟು ಜನರು ವಸತಿಯಲ್ಲಿ ಹೂಡಿಕೆ ಮಾಡಲು ಬಯಸಿದ್ರೆ, ಶೇ.6ರಷ್ಟು ಜನರು ವಾಣಿಜ್ಯ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. 80 ರಷ್ಟು ಮಹಿಳೆಯರು ಸಿದ್ಧ ಮನೆಗಳನ್ನು ಖರೀದಿಸಲು ಬಯಸುತ್ತಾರೆ.
ಸಮೀಕ್ಷೆಯ ಪ್ರಕಾರ, ಶೇಕಡಾ 73 ರಷ್ಟು ಮಹಿಳೆಯರು 40-75 ಲಕ್ಷ ರೂ.ಗಳ ಒಳಗೆ, 20 ಶೇ. 75 ಲಕ್ಷದಿಂದ 1 ಕೋಟಿ ರೂ.ಗಳ ಒಳಗೆ ಮತ್ತು ಉಳಿದ ಶೇ.7 ರಷ್ಟು ಮಹಿಳೆಯರು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಖರೀದಿಸಲು ಬಯಸುತ್ತಿದ್ದಾರೆ.
34 ಪ್ರತಿಶತ ಮಹಿಳೆಯರು ಹೊಸ ಮನೆಯನ್ನು ಖರೀದಿಸುವುದು ಪ್ರಸ್ತುತ ಹೂಡಿಕೆಯ ಅತ್ಯುತ್ತಮ ಆಯ್ಕೆ ಅನ್ನೋದ್ರ ಬಗ್ಗೆ ಒಲವು ಹೊಂದಿದ್ದಾರೆ. ಮತ್ತೊಂದು ಸಮೀಕ್ಷೆಯಲ್ಲಿ, ಡಿಜಿಟಲ್ ವೆಲ್ತ್ ಮ್ಯಾನೇಜರ್ ಸ್ಕ್ರಿಪ್‌ಬಾಕ್ಸ್ ಮಹಿಳೆಯರು ಹಣಕಾಸಿನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ ಎಂದು ಸಮೀಕ್ಷೆಯಲ್ಲಿ ಕಂಡುಬಂದ ವಿಚಾರವಾಗಿದೆ.