ತಮ್ಮ ಗೆಳತಿಯ ವಿವಾಹಕ್ಕೆಂದು ರಾಹುಲ್ ಗಾಂಧಿ ನೇಪಾಳಕ್ಕೆ ತೆರಳಿದ್ದು, ಈ ವೇಳೆ ಅಲ್ಲಿನ ‘ಲಾರ್ಡ್ ಆಫ್ ದಿ ಡ್ರಿಂಕ್ಸ್’ ಪಬ್ ನಲ್ಲಿ ಮಹಿಳೆಯೊಬ್ಬರೊಂದಿಗೆ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು.
ಈ ಮಹಿಳೆ ನೇಪಾಳದಲ್ಲಿರುವ ಚೀನಾ ರಾಯಭಾರಿ ಹ್ಯೂ ಯಾಂಕಿ ಎಂಬ ಸುದ್ದಿ ಹಬ್ಬಿದ್ದು, ಭಾರತದ ಜೊತೆ ಸದಾ ಕಿರಿಕಿರಿ ಮಾಡುವ ಚೀನಾವನ್ನು ಪ್ರತಿನಿಧಿಸುವ ರಾಯಭಾರಿ ಜೊತೆ ರಾಹುಲ್ ಗಾಂಧಿಯವರಿಗೇನು ಕೆಲಸ ಎಂಬ ಮಾತುಗಳು ಕೇಳಿಬಂದಿದ್ದವು.
ಇದೀಗ ನೈಟ್ ಕ್ಲಬ್ ದಲ್ಲಿ ರಾಹುಲ್ ಗಾಂಧಿ ಜೊತೆ ಇದ್ದ ಮಹಿಳೆ ಯಾರೆಂಬುದರ ಮಾಹಿತಿ ಬಹಿರಂಗವಾಗಿದ್ದು, ಆಕೆ ನೇಪಾಳದ ಚೀನಾ ರಾಯಭಾರಿ ಹ್ಯೂ ಯಾಂಕಿ ಅಲ್ಲ ಬದಲಾಗಿ ಮದುಮಗಳ ಗೆಳತಿ ಎಂದು ಹೇಳಲಾಗಿದೆ.
‘ಲಾರ್ಡ್ ಆಫ್ ದಿ ಡ್ರಿಂಕ್ಸ್’ ಪಬ್ ಸಿಇಓ ರಾಬಿನ್ ಶ್ರೇಷ್ಠ, ತಮ್ಮನ್ನು ಸಂಪರ್ಕಿಸಿದ ಭಾರತದ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ಅಂದಿನ ಪಾರ್ಟಿಯಲ್ಲಿ ನೇಪಾಳದ ಚೀನಾ ರಾಯಭಾರಿ ಹ್ಯೂ ಯಾಂಕಿ ಹಾಗೂ ರಾಯಭಾರ ಕಚೇರಿಯ ಯಾವುದೇ ಅಧಿಕಾರಿಗಳು ಭಾಗವಹಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.