ಲಖನೌ: ರಾಹುಲ್ ಗಾಂಧಿ ಸದ್ಯ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಇದ್ದಾರೆ. ಈ ಜೋಡೋ ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯುತ್ತಿದೆ. ಈಗಾಗಲೇ ತುಮಕೂರು ತಲುಪಿರುವ ಈ ಕಾರ್ಯಕ್ರಮ ಒಂದು ರೀತಿ ಯಶಸ್ವಿಯಾಗಿ ಸಾಗುತ್ತಿದೆ. ಇದೀಗ ರಾಹುಲ್ ಅಜ್ಜಿಯ ರೀತಿ ಜನರಿಗೆ ಹತ್ತಿರವಾಗುತ್ತಿದ್ದಾರೆ ಅಂತ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶದ ಕಾಂಗ್ರೆಸ್ ನ ನೂತನ ಮುಖ್ಯಸ್ಥ ಜೃಜಲಾಲ್ ಖಾಬ್ರಿ ಮಾತನಾಡಿದ್ದು, ಸಂವಿಧಾನ ಉಳಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಹಿಂದೆ ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ ಎಂದು ವಿಪಕ್ಷ ಟೀಕಿಸಲು ಇದನ್ನು ಬಳಸುತ್ತಿದ್ದರು. ಆದರೆ ಇದೀಗ ರಾಹುಲ್ ಎಂದರೆ ಇಂಡಿಯಾ, ಇಂಡಿಯಾ ಎಂದರೆ ರಾಹುಲ್ ಎನ್ನುವಂತಾಗಿದೆ.
ಭಾರತ ಒಂದು ಜಿಲ್ಲೆಯಲ್ಲ ಇದೊಂದು ಒಕ್ಕೂಟ. ಭಾರತ ಜೋಡೋವನ್ನು ರಾಹುಲ್ ಗಾಂಧಿ 13 ರಾಜ್ಯಗಳಲ್ಲಿ ಮಾಡುತ್ತಿದ್ದಾರೆ. ಈ ಮೂಲಕ ದೊಡ್ಡ ಗುರಿಯನ್ನು ಹೊಂದಿದ್ದಾರೆ ಎಂದು ಹೇಳಿದರು. ಇನ್ನು ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಬಿಜೆಪಿ ಠೇವಣಿಯನ್ನೂ ಕಳೆದುಕೊಳ್ಳಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಹಿಂದೆ ಬಿ ಎಸ್ ಪಿಯಲ್ಲಿದ್ದ ಖಾಬ್ರಿ ಇದೀಗ ಕಾಂಗ್ರೆಸ್ ಸೇರ್ಪಡೆಗೊಂಡು ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.