ಭಾರತದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರಾ..? ಅನ್ನೋ ಪ್ರಶ್ನೆ ಆಗಾಗ ಕೇಳಿಸ್ತಾನೆ ಇರುತ್ತೆ. ಇದಕ್ಕೆ ಉತ್ತರ ಮಾತ್ರ ಇಂದಿಗೂ ಸಿಕ್ಕಿಲ್ಲ. ಆಗಾಗ ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಬೆಳಕಿಗೆ ಬರ್ತಾನೆ ಇರುತ್ತೆ. ಈಗ ಮತ್ತೆ ಅಂಥಹದ್ದೊಂದು ಪ್ರಕರಣ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ದೆಹಲಿಯ ಘಿಟೊರಾಣಿ ಅನ್ನೋ ಪ್ರದೇಶ. ಅದು ಹೊಲ, ಗದ್ದೆಯಿಂದ ಕೂಡಿರೋ ಸ್ಥಳ. ಅದೇ ಜಾಗದಲ್ಲಿ ಯುವತಿಯೊಬ್ಬಳ ಶವ ಸಿಕ್ಕಿದೆ. ಯುವತಿಯ ಮೃತದೇಹ ಅರೆನಗ್ನಾವಸ್ಥೆಯಲ್ಲಿದ್ದು, ಅದು ಭಾಗಶಃ ಕೊಳೆತು ಹೋಗಿದೆ. ಆಕೆಯ ವಯಸ್ಸು 20-30 ಅಂತ ದೆಹಲಿ ಪೊಲೀಸರು ಅಂದಾಜಿಸಿದ್ದಾರೆ.
ಅನಾಮಿಕ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲೇ ಯುವತಿಯ ಕೊಳೆತ ದೇಹ ಪತ್ತೆಯಾಗಿದೆ. ಈಗಾಗಲೇ ಶವವನ್ನ ಸ್ಥಳೀಯ ಸರ್ಕಾರಿ ಶವಾಗಾರಕ್ಕೆ ಕಳುಹಿಸಲಾಗಿದೆ. ಅಲ್ಲಿ ಶವವನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೂ ಈ ಯುವತಿಯ ಕುರಿತಾದ ಯಾವುದೇ ಮಾಹಿತಿ ಇನ್ನೂ ಸಿಕ್ಕಿಲ್ಲ. ಪೊಲೀಸರು ಈ ಪ್ರಕರಣ ಕುರಿತು ತನಿಖೆ ಆರಂಭಿಸಿದ್ದಾರೆ.