ಇಂದು ದೇಶದಾದ್ಯಂತ ವರ್ಷದ ಮೊದಲ ರಾಷ್ಟ್ರೀಯ ಹಬ್ಬದ ಸಂಭ್ರಮ ನಡೆಯುತ್ತಿದೆ. ಪ್ರತಿ ಗಲ್ಲಿಯಲ್ಲು 73ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ಮೂರನೇ ಅಲೆ ನಡುವೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅದ್ದೂರಿಯಾಗಿ ಗಣತಂತ್ರದ ದಿನವನ್ನ ಆಚರಿಸಲಾಯಿತು. ರಾಷ್ಟ್ರಪತಿಗಳು ಧ್ವಜಾರೋಹಣ ಮಾಡುವ ಮೂಲಕ 73ನೇ ಗಣರಾಜ್ಯೋತ್ಸವದ ಆಚರಿಸಿದ್ರು. ಈ ಸಂದರ್ಭದಲ್ಲಿ ರಾಷ್ಟ್ರಪತಿಯ ಅಂಗರಕ್ಷಕ ನಿವೃತ್ತಿಯಾಗಿದ್ದಾನೆ.
ಇಂದು ವಿರಾಟ್ ನಿವೃತ್ತಿಯಾಗಿದ್ದಾನೆ. ಅರೆ ಮೊನ್ನೆ ತಾನೆ ಎಲ್ಲಾ ಮಾದರಿಯ ಕ್ಯಾಪ್ಟನ್ಸಿ ತ್ಯಜಿಸಿದ ವಿರಾಟ್ ಕೊಹ್ಲಿ ಇಂದು ಸಡನ್ನಾಗಿ ನಿವೃತ್ತಿಯಾದ್ರು ಅನ್ಕೊಂಡ್ರ. ಸಹಜವಾಗಿ ಇಂದು ನಿವೃತ್ತಿಯಾಗಿರೋದು ರಾಷ್ಟ್ರಪತಿಯ ಅಂಗರಕ್ಷಕ ಕುದುರೆ ವಿರಾಟ್.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರ ಅಂಗರಕ್ಷಕನಾಗಿದ್ದ ವಿರಾಟ್ ಗೆ ಇಂದು ಗಣತಂತ್ರದ ದಿನದಂದು ತನ್ನ ವೃತ್ತಿ ಜೀವನದ ಕೊನೆ ದಿನ. ಅಂಗರಕ್ಷಕನ ಕರ್ತವ್ಯದಿಂದ ನಿವೃತ್ತಿಯಾಗಿರೊ ವಿರಾಟ್ ನನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೀಳ್ಕೊಟ್ಟರು. ಇನ್ನೂ ವಿರಾಟ್ಗೆ ಈ ವರ್ಷ ಸೇನಾ ಮುಖ್ಯಸ್ಥರ ಶ್ಲಾಘನೆಯ ಪದಕವನ್ನು ಸಹ ನೀಡಲಾಗಿದೆ. ಗಣತಂತ್ರ ದಿನಾಚರಣೆ ಮುಗಿಸಿ ರಾಜಪಥದಿಂದ ಹೊರಡುವಾಗ ಪ್ರಧಾನಿ ಹಾಗೂ ರಾಷ್ಟ್ರಪತಿಯವರು ವಿರಾಟ್ ಬೆನ್ನು ಸವರಿ ಅವನ ಸೇವೆಯನ್ನ ಶ್ಲಾಘಿಸಿದ್ರು.