ಹಿಂದೂ ಧರ್ಮದಲ್ಲಿ ಬಣ್ಣಗಳ ಆಟ ಹೋಳಿಗೆ ಮಹತ್ವದ ಸ್ಥಾನವಿದೆ. ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಹೋಳಿ ಆಚರಣೆ ನಡೆಯುತ್ತದೆ. ಮಾರ್ಚ್ 7 ರಂದು ಈ ಬಾರಿ ಬಣ್ಣಗಳನ್ನು ಎರೆಚಿಕೊಂಡು ಹೋಳಿ ಹಬ್ಬ ಆಚರಿಸಲಾಗುತ್ತದೆ. ಪ್ರತಿಯೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ರಾಶಿಗೆ ಅನುಸಾರ ನಿಮಗೆ ಅನುಕೂಲವಾಗುವ ಬಣ್ಣದಲ್ಲಿ ಹೋಳಿಯಾಡಿದ್ರೆ ನಿಮ್ಮ ಅದೃಷ್ಟ ಬದಲಾಗಲಿದೆ.
ಮೇಷ: ಈ ರಾಶಿಯವರು ಗುಲಾಬಿ ಹಾಗೂ ಹಳದಿ ಬಣ್ಣದಲ್ಲಿ ಹೋಳಿಯಾಡಬೇಕು. ಇವೆರಡೂ ಪ್ರಿಯ ಬಣ್ಣಗಳಾಗಿವೆ. ಈ ಬಣ್ಣದಲ್ಲಿ ಹೋಳಿಯಾಡಿದ್ರೆ ಸುಖ-ಸಮೃದ್ಧಿ ಪ್ರಾಪ್ತಿಯಾಗಲಿದೆ.
ವೃಷಭ: ಈ ರಾಶಿಯವರು ಬಿಳಿ ಬಣ್ಣದ ಬಟ್ಟೆ ಧರಿಸಿ ಕಿತ್ತಳೆ ಬಣ್ಣದಲ್ಲಿ ಹೋಳಿಯಾಡಬೇಕು. ಇದು ಅದೃಷ್ಟದ ಬಾಗಿಲು ತೆರೆಯಲು ನೆರವಾಗುತ್ತದೆ.
ಮಿಥುನ: ಈ ರಾಶಿಯವರು ಹಸಿರು ಬಣ್ಣದಲ್ಲಿ ಹೋಳಿಯಾಡಬೇಕು. ನೌಕರಿ ಹಾಗೂ ವ್ಯವಹಾರದಲ್ಲಿ ಮನೆ ಮಾಡಿದ್ದ ಒತ್ತಡ ಕಡಿಮೆಯಾಗುತ್ತದೆ. ಸಂಪತ್ತು ವೃದ್ಧಿಯಾಗುತ್ತದೆ.
ಕರ್ಕ: ಬಿಳಿ ಬಣ್ಣದ ಬಟ್ಟೆ ಧರಿಸಿ ನೀಲಿ ಮತ್ತು ಹಸಿರು ಬಣ್ಣದಲ್ಲಿ ಹೋಳಿಯಾಡಬೇಕು. ಶಾಂತಿ ಹಾಗೂ ಸಂತೋಷ ಪ್ರಾಪ್ತಿಗೆ ಇದು ಕಾರಣವಾಗುತ್ತದೆ.
ಸಿಂಹ: ಈ ರಾಶಿಯವರು ಶಕ್ತಿವಂತರಾಗಿರುತ್ತಾರೆ. ಇವರು ಹೋಳಿ ದಿನ ಕೆಂಪು, ಹಳದಿ, ಕಿತ್ತಳೆ ಬಣ್ಣವನ್ನು ಬಳಸಬೇಕು.
ಕನ್ಯಾ: ಹಸಿರು, ಕಿತ್ತಳೆ, ಕಂದು ಬಣ್ಣವನ್ನು ಹೋಳಿಯಾಡಲು ಬಳಸಿದ್ರೆ ಒಳ್ಳೆಯದು.
ತುಲಾ: ಈ ರಾಶಿಯವರು ಕೆನ್ನೇರಳೆ, ನೀಲಿ ಮತ್ತು ಕಂದು ಬಣ್ಣದವನ್ನು ಬಳಸಬೇಕು. ಹಳಸಿದ ಸಂಬಂಧ ಮತ್ತೆ ಬೆಸೆಯುವ ಜೊತೆಗೆ ಸಂತೋಷ ಹೆಚ್ಚಾಗುತ್ತದೆ.
ವೃಶ್ಚಿಕ: ಈ ರಾಶಿಯವರು ಗಾಢ ಕೆಂಪು ಮತ್ತು ಹಳದಿ ಬಣ್ಣವನ್ನು ಬಳಸಬೇಕು. ಉದ್ಯೋಗ ಪ್ರಾಪ್ತಿಯಾಗುತ್ತದೆ.
ಧನು: ಈ ರಾಶಿಯವರಿಗೆ ಹೋಳಿ ದಿನ ಹಳದಿ ಮತ್ತು ಕಿತ್ತಳೆ ಬಣ್ಣ ಮಂಗಳಕರ.
ಮಕರ: ಈ ರಾಶಿಯವರು ಉಜ್ವಲ ಭವಿಷ್ಯಕ್ಕಾಗಿ ಹೋಳಿ ದಿನ ನೀಲಿ ಮತ್ತು ಕಪ್ಪು ಬಣ್ಣವನ್ನು ಬಳಸಬೇಕು.
ಕುಂಭ: ಜೀವನದ ಕಷ್ಟಗಳು ದೂರವಾಗಿ ಸುಖ ಪ್ರಾಪ್ತಿ ಬಯಸುವವರು ಹೋಳಿ ದಿನ ಗಾಢ ನೀಲಿ ಮತ್ತು ಕಂದು ಬಣ್ಣವನ್ನು ಬಳಸಬೇಕು.
ಮೀನ: ಈ ರಾಶಿಯವರು ಹಳದಿ, ಹಸಿರು ಮತ್ತು ಗುಲಾಬಿ ಬಣ್ಣದಲ್ಲಿ ಹೋಳಿಯಾಡಬೇಕು. ಧನ, ಸಂಪತ್ತು ಪ್ರಾಪ್ತಿಯಾಗುತ್ತದೆ.