ಹಿಂದೂ ಧರ್ಮದಲ್ಲಿ ಗಣೇಶ ಚತುರ್ಥಿಗೆ ಮಹತ್ವದ ಸ್ಥಾನವಿದೆ. ಗಣೇಶ ಚತುರ್ಥಿಯನ್ನು ಉತ್ಸವದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಗಣಪತಿ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಿ, ಅಲಂಕಾರ ಮಾಡಿ, ವಿಘ್ನವಿನಾಯಕನಿಗೆ ಪ್ರಿಯವಾದ ತಿಂಡಿಗಳನ್ನು ಅರ್ಪಿಸಿ, ಅದ್ಧೂರಿಯಾಗಿ ಪೂಜೆ ಮಾಡಿ ನಂತ್ರ ವಿಸರ್ಜನೆ ಮಾಡಲಾಗುತ್ತದೆ.
ಗಣೇಶ ಚತುರ್ಥಿಯಂದು ಗಣೇಶನಿಗೆ ನಿಮ್ಮ ರಾಶಿಗನುಗುಣವಾಗಿ ಈ ತಿಂಡಿಗಳನ್ನು ನೈವೇದ್ಯ ಮಾಡಿ.
ಮೇಷ: ಈ ರಾಶಿಯವರು ಗಣೇಶನಿಗೆ ಲಾಡನ್ನು ನೈವೇದ್ಯಕ್ಕೆ ಅರ್ಪಿಸಿ.
ವೃಷಭ: ಈ ರಾಶಿಯವರು ತೆಂಗಿನಕಾಯಿ ಅಥವಾ ಸಕ್ಕರೆ ಮಿಠಾಯಿಯನ್ನು ಅರ್ಪಿಸಿ.
ಮಿಥುನ: ಈ ರಾಶಿಯವರು ಹೆಸರುಬೇಳೆ ಲಾಡನ್ನು ಗಣಪತಿಗೆ ಅರ್ಪಿಸಿ. ವಿಶೇಷ ಫಲ ಪ್ರಾಪ್ತಿಯಾಗುತ್ತದೆ.
ಕರ್ಕ: ಈ ರಾಶಿಯವರು ಬೆಣ್ಣೆ, ಖೀರ್ ಮತ್ತು ಲಾಡನ್ನು ಅರ್ಪಿಸಿ.
ಸಿಂಹ: ಬೆಲ್ಲದ ಮೋದಕ ಅಥವಾ ಲಾಡನ್ನು ಅರ್ಪಿಸಿ.
ಕನ್ಯಾ: ಕನ್ಯಾ ರಾಶಿಯವರು ವಿನಾಯಕನಿಗೆ ಹಸಿರು ಹಣ್ಣು ಮತ್ತು ಒಣ ದ್ರಾಕ್ಷಿಯನ್ನು ನೀಡಬೇಕು.
ತುಲಾ: ಈ ರಾಶಿಯವರು ಲಾಡು ಹಾಗೂ ಬಾಳೆ ಹಣ್ಣನ್ನು ಅರ್ಪಿಸಬೇಕು.
ವೃಶ್ಚಿಕ: ಲಾಡನ್ನು ಗಣಪತಿಗೆ ಅರ್ಪಿಸಬೇಕು.
ಧನು: ಈ ರಾಶಿಯವರು ಮೋದಕ ಹಾಗೂ ಬಾಳೆ ಹಣ್ಣನ್ನು ನೈವೇದ್ಯ ಮಾಡಿ.
ಮಕರ: ಈ ರಾಶಿಯವರು ಗಣೇಶ ಚತುರ್ಥಿಯಂದು ಎಳ್ಳನ್ನು ಗಣೇಶನಿಗೆ ಅರ್ಪಿಸಿ.
ಕುಂಭ: ಬೆಲ್ಲದ ಲಾಡನ್ನು ನೈವೇದ್ಯ ಮಾಡಬೇಕು.
ಮೀನ: ಬೇಸನ್ ಲಾಡು, ಬಾಳೆ ಹಣ್ಣು, ಬಾದಾಮಿ ಬರ್ಫಿಯನ್ನು ಅರ್ಪಿಸಿ.