ರಾಯಲ್ ಎನ್ಫೀಲ್ಡ್ ಬೈಕ್ಗಳು ದ್ವಿಚಕ್ರ ವಾಹನ ಸವಾರರ ಫೇವರಿಟ್. 350 ಸಿಸಿ ವಿಭಾಗದಲ್ಲಂತೂ ರಾಯಲ್ ಎನ್ಫೀಲ್ಡ್ ಬೈಕ್ಗಳು ಮುಂಚೂಣಿಯಲ್ಲಿವೆ. ಜಾವಾ, ಯೆಜ್ಡಿ ಹೀಗೆ ಸಾಕಷ್ಟು ಬೈಕ್ಗಳು ಛಾಪು ಮೂಡಿಸಿದ್ದರೂ ರಾಯಲ್ ಎನ್ಫೀಲ್ಡ್ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.
ರಾಯಲ್ ಎನ್ಫೀಲ್ಡ್ ಕಂಪನಿ ಬೈಕ್ ಕ್ಲಾಸಿಕ್ 350 ವಿಭಾಗದ ಬೈಕ್ ಮಾರಾಟದಲ್ಲಿ ಸಪ್ಟೆಂಬರ್ ತಿಂಗಳಿನಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ತಿಂಗಳು 27,571 ಯುನಿಟ್ಗಳನ್ನು ಮಾರಾಟ ಮಾಡಿದೆ. ರಾಯಲ್ ಎನ್ಫೀಲ್ಡ್ ಹಂಟರ್ 350 ಎರಡನೇ ಸ್ಥಾನದಲ್ಲಿದ್ದು, 17,118 ಬೈಕ್ಗಳು ಮಾರಾಟವಾಗಿವೆ. ಟಾಪ್ 5 ಪಟ್ಟಿಯನ್ನು ನೋಡಿದರೆ ಇದರಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ಗಳೇ ಹೆಚ್ಚಾಗಿವೆ.
ರಾಯಲ್ ಎನ್ಫೀಲ್ಡ್ ಎಲೆಕ್ಟ್ರಾ 350 ಬೈಕ್ಗಳ ಮಾರಾಟ ಭರ್ಜರಿಯಾಗಿದೆ. ಸೆಪ್ಟೆಂಬರ್ನಲ್ಲಿ 4,174 ಬೈಕ್ಗಳು ಬಿಕರಿಯಾಗಿವೆ. ಕಳೆದ ವರ್ಷ ಇದೇ ಸಮಯದಲ್ಲಿ ಕೇವಲ 672 ಯುನಿಟ್ಗಳು ಸೇಲ್ ಆಗಿದ್ದವು. ಈ ಬಾರಿ ರಾಯಲ್ ಎನ್ಫೀಲ್ಡ್ ಎಲೆಕ್ಟ್ರಾ 350 ಮಾರಾಟದಲ್ಲಿ ಶೇ.521ರಷ್ಟು ಹೆಚ್ಚಳವಾಗಿರೋದು ವಿಶೇಷ. ಅದೇ ರೀತಿ ಕಂಪನಿಯ ಮತ್ತೊಂದು ಬೈಕ್ ರಾಯಲ್ ಎನ್ಫೀಲ್ಡ್ ಬುಲೆಟ್ 350 ಕೂಡ ಹಿಂದೆ ಬಿದ್ದಿಲ್ಲ.
ಸೆಪ್ಟೆಂಬರ್ನಲ್ಲಿ 8,755 ಯುನಿಟ್ಗಳು ಮಾರಾಟವಾಗಿವೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೇವಲ 2,207 ಯುನಿಟ್ಗಳು ಮಾತ್ರ ಮಾರಾಟವಾಗಿದ್ದವು. ಅಂದರೆ ಈ ಮಾದರಿ ಕೂಡ ಶೇ.315ರಷ್ಟು ಬೆಳವಣಿಗೆ ದಾಖಲಿಸಿದೆ. ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕ್ನ ಬೆಲೆ 1.47 ಲಕ್ಷ ರೂಪಾಯಿ ಇದ್ದರೆ ಎಲೆಕ್ಟ್ರಾ 350 ಬೆಲೆ 1.63 ಲಕ್ಷ ರೂಪಾಯಿ ಇದೆ.