ಭಾರತದಲ್ಲಿ ಆಗಸ್ಟ್ 7 ರಂದು ರಾಯಲ್ ಎನ್ ಫೀಲ್ಡ್ ಹಂಟರ್ 350 ಬೈಕ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಹೊಸ ಬೈಕ್‌ನ ಲುಕ್ ಹೇಗಿದೆ ಅನ್ನೋದನ್ನು ಕಂಪನಿ ರಿವೀಲ್ ಮಾಡಿದೆ. 2022ರಲ್ಲಿ ಭಾರತದಲ್ಲಿ ಬಿಡುಗಡೆಯಾಗ್ತಿರೋ ಬಹುನಿರೀಕ್ಷಿತ ಬೈಕ್ ಇದಾಗಿದೆ.
ರಾಯಲ್ ಎನ್‌ಫೀಲ್ಡ್ ಹಂಟರ್ 350ಯ ವಿಶೇಷತೆಗಳು ಹಾಗೂ ಲುಕ್ ಪಕ್ಕಾ ಸ್ಪೋರ್ಟ್ಸ್ ಬೈಕ್‌ನಂತೆಯೇ ಇದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಪ್ರವಾಸಕ್ಕೆ ಹೋಗಲು ಸೂಕ್ತವಾಗಿದೆ. ಆದ್ರೆ ಈ ಹೊಸ ಬೈಕ್ ದಿನನಿತ್ಯದ ಓಡಾಟಕ್ಕೂ ಉತ್ತಮವೆನಿಸಿದೆ.
ರಾಯಲ್ ಎನ್‌ಫೀಲ್ಡ್ ಹಂಟರ್ 350 ಎರಡು ಬಣ್ಣಗಳಲ್ಲಿ ಲಭ್ಯವಿದೆ. ವಿಡಿಯೋದಲ್ಲಿ ಬಹಿರಂಗಪಡಿಸಿರೋ ಬೈಕ್ ಬ್ಲೂ ಶೇಡ್‌ನಲ್ಲಿದ್ದು, ಪೆಟ್ರೋಲ್ ಟ್ಯಾಂಕ್ ಬಿಳಿ ಬಣ್ಣದಲ್ಲಿದೆ. ಗುಂಡಗಿನ ಹೆಡ್ ಲ್ಯಾಂಪ್ಸ್, ಇಂಡಿಕೇಟರ್‌ಗಳು, ಉದ್ದನೆಯ ಸಿಂಗಲ್ ಸೀಟ್ ಈ ಬೈಕ್‌ನ ಪ್ರಮುಖ ಆಕರ್ಷಣೆ.
ರಾಯಲ್ ಎನ್‌ಫೀಲ್ಡ್‌ನ ಉಳಿದ ಬೈಕ್‌ಗಳಿಗೆ ಹೋಲಿಸಿದ್ರೆ ಹಂಟರ್ 350 ಗಾತ್ರದಲ್ಲಿ ಸ್ವಲ್ಪ ಚಿಕ್ಕದೆನಿಸುತ್ತಿದೆ. Royal Enfield Hunter 350 Metro and Royal Enfield Hunter 350 Retro ಹೀಗೆ ಎರಡು ಮಾದರಿಗಳಲ್ಲಿ ಈ ಬೈಕ್ ಲಭ್ಯವಿದೆ. ಇವುಗಳು 349 ಸಿಸಿ ಎಂಜಿನ್ ಹೊಂದಿವೆ.
ಹಂಟರ್ 350 ಬೈಕ್‌ನ ತೂಕ 181 ಕೆಜಿ. 13 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಅನ್ನು ಇದು ಹೊಂದಿದೆ. ಟ್ಯೂಬ್‌ಲೆಸ್ ಟೈರ್ ಇದರ ವಿಶೇಷತೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್‌ನ ಬೆಲೆ ಅಂದಾಜು 1 ಲಕ್ಷ ರೂಪಾಯಿ ಇರಬಹುದೆಂದು ಹೇಳಲಾಗ್ತಿದೆ.
https://www.instagram.com/reel/Cg1nzRkh9PH/?utm_source=ig_embed&ig_rid=80dfb0da-5fd0-4868-abfb-ff21afc0ec8d