ಇಂದಿನ ಬಿಝಿ ಜೀವನ, ಒತ್ತಡದ ಬದುಕು ಮೊದಲಾದ ಕಾರಣಗಳಿಂದ ನಿದ್ರಾಹೀನತೆಯ ಸಮಸ್ಯೆ ಹಲವರನ್ನು ಕಾಡುತ್ತಿದೆ. ಕೆಲವೊಂದು ಮನೆಯ ಮದ್ದನ್ನು ಅನುಸರಿಸಿದರೆ ಸುಲಭವಾಗಿ ನಿದ್ರೆಗೆ ಜಾರಬಹುದು. ಅದೇನು ಅಂತ ತಿಳಿದುಕೊಳ್ಳಿ.
* ಗಸಗಸೆ ಪಾಯಸ ಮಾಡಿಕೊಂಡು ಕುಡಿದರೆ ದೇಹ ತಂಪಾಗುವುದಲ್ಲದೆ ಚೆನ್ನಾಗಿ ನಿದ್ರೆ ಬರುತ್ತದೆ.
* ಸಬ್ಬಸ್ಸಿಗೆ ಸೊಪ್ಪು ಬಸಿದು ಮಾಡಿದ ಸಾರನ್ನು ಉಪಯೋಗಿಸುತ್ತಿದ್ದರೆ ಚೆನ್ನಾಗಿ ನಿದ್ರೆ ಬರುವುದು ಖಚಿತ.
* ಸೌತೆಕಾಯಿ ತಿರುಳನ್ನು ಅಂಗಾಲಿಗೆ ಮೂರು ನಿಮಿಷ ಉಜ್ಜಿಕೊಂಡರೆ ಚೆನ್ನಾಗಿ ನಿದ್ರೆ ಬರುವುದರ ಜೊತೆಗೆ ದೇಹ ಕೂಡ ತಂಪಾಗಿರುತ್ತದೆ.
* ವಾರಕ್ಕೊಮ್ಮೆ ಹರಳೆಣ್ಣೆಯನ್ನು ತಲೆ, ಮೈ, ಕೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ದೇಹದ ಉಷ್ಣ ಕಡಿಮೆ ಆಗುತ್ತದೆ. ಹಾಗು ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಬರುತ್ತದೆ.
* ಹಸಿ ಅಲಸಂದೆ ಕಾಳನ್ನು ಬೆಲ್ಲದೊಂದಿಗೆ ಸೇರಿಸಿ ಜಗಿದು ತಿಂದರೆ ನಿದ್ರಾಹೀನತೆಯಿಂದ ಬಳಲುವುದು ತಪ್ಪುವುದಲ್ಲದೇ ಶರೀರದಲ್ಲಿ ಲವಲವಿಕೆ ಹೆಚ್ಚುತ್ತದೆ.
* ಹುರುಳಿಕಾಳು ಮೊಳಕೆ ಸಾರನ್ನು ಸೇವಿಸುವುದರಿಂದಲೂ ಉತ್ತಮ ನಿದ್ರೆ ಪಡೆಯಬಹುದು.