ರಾತ್ರಿಯ ವೇಳೆ ನಾವು ಮಲಗುವ ಪ್ರಕ್ರಿಯೆಯು ಕೂಡ ನಮಗೆ ಅದೃಷ್ಟ, ದುರಾದೃಷ್ಟವನ್ನು ತರುತ್ತದೆ. ರಾತ್ರಿಯ ವೇಳೆ ಮಲಗುವಾಗ ಕಂಬಳಿಯನ್ನು ತಲೆಯವರೆಗೆ ಮುಚ್ಚಿಕೊಂಡು ಮಲಗುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಅದಕ್ಕೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣ ಏನೆಂಬುದನ್ನು ತಿಳಿದುಕೊಳ್ಳೋಣ.
ವೈಜ್ಞಾನಿಕದ ಪ್ರಕಾರ ರಾತ್ರಿಯ ವೇಳೆ ತಲೆಯವರೆಗೆ ಕುಂಬಳಿ ಮುಚ್ಚಿ ಮಲಗಿದರೆ ಉಸಿರಾಡಲು ಹೊಸ ಗಾಳಿ ಸಿಗದೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಎಂದು ಹೇಳಲಾಗುತ್ತದೆ. ಹಾಗೇ ಆಧ್ಯಾತ್ಮಿಕದ ಪ್ರಕಾರ ನಮ್ಮ ದೇಹವು ದೇಗುಲವಾದರೆ ನಮ್ಮ ತಲೆ ಕಲಶ ಎನ್ನಲಾಗುತ್ತದೆ. ಈ ಕಲಶವನ್ನು ಮುಚ್ಚಬಾರದು. ಅದು ಯಾವಾಗಲೂ ಕಾಣುವಂತೆ ಇರಬೇಕು.
ಅಲ್ಲದೇ ಜೀವನದಲ್ಲಿ ಕಷ್ಟ, ಸುಖಗಳು ಸಹಜ, ಮನುಷ್ಯ ಇವೆರಡನ್ನು ಸಹಿಸಿಕೊಂಡರೆ ಅವರ ಮೇಲೆ ದೇವರು ಅನುಗ್ರಹ ತೋರುತ್ತಾನೆ. ಹಾಗಾಗಿ ಚಳಿಯನ್ನು ಸಹಿಸಿಕೊಳ್ಳಬೇಕು. ಅದರ ಬದಲು ಕಂಬಳಿಯಿಂದ ದೇಹವಿಡಿ ಮುಚ್ಚಿಕೊಂಡು ಮಲಗಿದರೆ ದೇವರು ಕೋಪಗೊಳ್ಳುತ್ತಾನೆ ಎನ್ನಲಾಗುತ್ತದೆ. ಹಾಗಾಗಿ ರಾತ್ರಿಯ ವೇಳೆ ನಾವು ಮಲಗುವಾಗ ಶಾಸ್ತ್ರದ ನಿಯಮದ ಪ್ರಕಾರ ಮಲಗಿದರೆ ಅದರಿಂದ ನಮ್ಮ ಜೀವನದಲ್ಲಿ ಏಳಿಗೆಯಾಗುತ್ತದೆ ಎನ್ನಲಾಗುತ್ತದೆ.