ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಅವುಗಳನ್ನು ತಿನ್ನಲು ನಿರ್ದಿಷ್ಟ ಸಮಯವನ್ನು ಅನುಸರಿಸಬೇಕು. ಕೆಲವು ಹಣ್ಣುಗಳನ್ನು ರಾತ್ರಿ ತಿನ್ನುವುದು ಹಾನಿಕಾರಕ.
ದ್ರಾಕ್ಷಿ : ದ್ರಾಕ್ಷಿ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ರುಚಿಕರವಾದ ಹಣ್ಣು. ಆದರೆ ರಾತ್ರಿ ಮಲಗುವ ಮುನ್ನ ದ್ರಾಕ್ಷಿ ತಿನ್ನುವುದು ಹಾನಿಕಾರಕ. ದ್ರಾಕ್ಷಿಯಲ್ಲಿ ಸಿಟ್ರಿಕ್ ಅಂಶವಿರುತ್ತದೆ. ಇದರಿಂದ ಎದೆಯುರಿ ಬರಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟ ಕೂಡ ಹೆಚ್ಚಳವಾಗಬಹುದು.
ಕಲ್ಲಂಗಡಿ: ರಾತ್ರಿ ಮಲಗುವ ಮುನ್ನ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಕೂಡ ಆರೋಗ್ಯಕ್ಕೆ ಹಾನಿಕರ. ರಾತ್ರಿಯಲ್ಲಿ ಕಲ್ಲಂಗಡಿ ತಿನ್ನುವುದರಿಂದ ಪದೇ ಪದೇ ಮೂತ್ರಕೋಶ ಭರ್ತಿಯಾಗುತ್ತದೆ. ಈ ಕಾರಣದಿಂದಾಗಿ ರಾತ್ರಿ ನಿದ್ರೆಗೆ ಭಂಗ ಬರುತ್ತದೆ.
ಕಿತ್ತಳೆ : ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ರಾತ್ರಿಯಲ್ಲಿ ಇದನ್ನು ತಿನ್ನಬಾರದು. ರಾತ್ರಿ ಮಲಗುವ ಮುನ್ನ ಕಿತ್ತಳೆ ತಿನ್ನುವುದರಿಂದ ಅಸ್ವಸ್ಥತೆ ಉಂಟಾಗುತ್ತದೆ. ಇದು ಹೊಟ್ಟೆ ನೋವಿಗೆ ಕಾರಣವಾಗಬಹುದು.
ಸೀಬೆಹಣ್ಣು : ಪೇರಲ ಹಣ್ಣಿನಲ್ಲಿ ಬಹಳಷ್ಟು ಫೈಬರ್ ಇರುತ್ತದೆ. ಇದನ್ನು ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ, ಆದರೆ ರಾತ್ರಿ ಮಲಗುವ ಮೊದಲು ಇದನ್ನು ತಿನ್ನಬಾರದು. ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶದಿಂದಾಗಿ ರಾತ್ರಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ, ಪರಿಣಾಮ ಹೊಟ್ಟೆ ನೋವು ಬರಬಹುದು.
ಬಾಳೆಹಣ್ಣು: ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳು ಸಿಗುತ್ತದೆ. ಒಂದು ಬಾಳೆಹಣ್ಣಿನಲ್ಲಿ ಸುಮಾರು 150 ಕ್ಯಾಲೋರಿಗಳಿರುತ್ತದೆ, 37.5 ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ಆದರೆ ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ಬೊಜ್ಜು ಬರಬಹುದು.