alex Certify ರಾತ್ರಿ ಚೆನ್ನಾಗಿ ನಿದ್ದೆ ಬರುತ್ತಿಲ್ಲವೇ….? ಇಲ್ಲಿದೆ ನೋಡಿ ಸುಲಭ ಪರಿಹಾರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಚೆನ್ನಾಗಿ ನಿದ್ದೆ ಬರುತ್ತಿಲ್ಲವೇ….? ಇಲ್ಲಿದೆ ನೋಡಿ ಸುಲಭ ಪರಿಹಾರ….!

ನಿದ್ರೆ ಮಾಡುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ದೆಯೇ ಇಲ್ಲದಿದ್ದರೆ ದಿನದ ಸಾಮಾನ್ಯ ಚಟುವಟಿಕೆಗಳು ಸಹ ಕಷ್ಟಕರವಾಗುತ್ತಿದ್ದವು. ಆರೋಗ್ಯವಂತ ವಯಸ್ಕ 24 ಗಂಟೆಗಳಲ್ಲಿ ಕನಿಷ್ಠ 8 ಗಂಟೆಗಳ ನಿದ್ದೆ ಮಾಡಬೇಕು. ರಾತ್ರಿ ಸರಿಯಾಗಿ ನಿದ್ದೆ ಬಾರದವರು, ದಿನವಿಡೀ ದಣಿವು ಅನುಭವಿಸುತ್ತಾರೆ. ಅವರ ಮುಖವೂ ಕಳೆಗುಂದಿದಂತೆ ಕಾಣುತ್ತದೆ. ಕೆಲವರಿಗೆ ನಿದ್ರೆ ಮಾಡಲು ಪೂರ್ಣ ಸಮಯವಿರುತ್ತದೆ, ಆದರೆ ಅವರು ರಾತ್ರಿಯಿಡೀ ಚಡಪಡಿಕೆ ಅನುಭವಿಸುತ್ತಾರೆ.

ಶಾಂತವಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ನಮ್ಮ ನಿರ್ಲಕ್ಷ್ಯವೇ ಕಾರಣವಾಗಿರಬಹುದು. ಕೆಲವೊಂದು ಸರಳ ಸೂತ್ರಗಳನ್ನು ಅನುಸರಿಸಿದರೆ ರಾತ್ರಿ ಚೆನ್ನಾಗಿ ನಿದ್ರಿಸಬಹುದು. ಕೆಲವರು ಮಲಗಲು ಒಂದಲ್ಲ ಹಲವಾರು ದಿಂಬುಗಳನ್ನು ಒಟ್ಟಿಗೆ ಬಳಸುತ್ತಾರೆ. ನಿಮಗೂ ಈ ಅಭ್ಯಾಸವಿದ್ದರೆ ಇಂದೇ ಬದಲಿಸಿಕೊಳ್ಳಿ. ಹೆಚ್ಚು ದಿಂಬನ್ನು ಹಾಕಿಕೊಳ್ಳುವುದರಿಂದ ಕುತ್ತಿಗೆ ಎತ್ತರವಾಗುತ್ತದೆ ಮತ್ತು ನೀವು ಗೊರಕೆ ಹೊಡೆಯಲು ಪ್ರಾರಂಭಿಸುತ್ತೀರಿ, ಜೊತೆಗೆ ನಿದ್ರೆಗೂ ತೊಂದರೆಯಾಗುತ್ತದೆ.

ಅನೇಕ ಬಾರಿ ಹಾಸಿಗೆಯ ಪಾದದ ಭಾಗವು ಕೆಳಗಿಳಿದಿರುತ್ತದೆ. ಹಾಗಿದ್ದಲ್ಲಿ ಹಾಸಿಗೆಯನ್ನು ಈ ಸ್ಥಳದಲ್ಲಿ ಸ್ವಲ್ಪ ಮೇಲಕ್ಕೆತ್ತಿ. ಏಕೆಂದರೆ ಇದು ಅತ್ಯುತ್ತಮ ಮಲಗುವ ಪೊಸಿಶನ್‌. ಈ ಕಾರಣದಿಂದಾಗ ರಕ್ತದ ಹರಿವು ಕಾಲಿನಿಂದ ಹೃದಯದ ಕಡೆಗೆ ಹೋಗುತ್ತದೆ. ಚಡಪಡಿಕೆಯಿಂದ ನಿದ್ರಿಸಲಾಗದಿದ್ದರೆ, ಮೊದಲು ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ತಂದು ಮೃದುವಾದ ಸಂಗೀತವನ್ನು ಆಲಿಸಿ. ಅದು ನಿಮಗೆ ವಿಶ್ರಾಂತಿ ನೀಡುತ್ತದೆ ಮತ್ತು ನೀವು ಚೆನ್ನಾಗಿ ಮಲಗಲು ಪ್ರಾರಂಭಿಸುತ್ತೀರಿ.

ಪ್ರತಿದಿನ ನಿಮ್ಮ ಮಲಗುವ ಸಮಯವನ್ನು ನಿಗದಿಪಡಿಸಿ ಮತ್ತು ಅದರಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ನಿದ್ರೆಯ ಚಕ್ರವು ನಿಮ್ಮ ಮನಸ್ಸಿನಲ್ಲಿ ಸ್ಥಿರವಾಗಿರುತ್ತದೆ ಮತ್ತು ನಿದ್ರೆಗೆ ಯಾವುದೇ ತೊಂದರೆ ಇರುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...