
ನಿದ್ರೆಯಲ್ಲಿದ್ದಾಗ ಕನಸು ಕಾಣೋದು ಸಾಮಾನ್ಯ. ಕೆಲ ಕನಸು ಶುಭವಾಗಿದ್ದರೆ ಮತ್ತೆ ಕೆಲ ಕನಸು ಅಶುಭವಾಗಿರುತ್ತದೆ. ಕೆಲವೊಮ್ಮೆ ಕೆಟ್ಟ ಸ್ವಪ್ನಗಳು ನಿದ್ರೆ ಹಾಳು ಮಾಡುತ್ವೆ. ಭಯ ಹುಟ್ಟಿಸುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಮುನ್ನ ನಾವು ಮಾಡುವ ಕೆಲವೊಂದು ಉಪಾಯಗಳು ದುಃಸ್ವಪ್ನ ಬೀಳದಂತೆ ತಡೆಯುತ್ತದೆ.
ರಾತ್ರಿ ಮಲಗುವ ವೇಳೆ ಕೈ-ಕಾಲು ತೊಳೆದುಕೊಂಡು ಹನುಮಾನ್ ಚಾಲೀಸ್ ಪಠಿಸಿ ಮಲಗಬೇಕು. ಪ್ರತಿ ದಿನ ಹೀಗೆ ಮಾಡಿದಲ್ಲಿ ದುಃಸ್ವಪ್ನ ಬೀಳುವುದಿಲ್ಲ.
ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರ ಹಾಸಿಗೆ ಕೆಳಗೆ ಕಬ್ಬಿಣದ ವಸ್ತುವನ್ನಿಡಿ. ಇದು ನಕಾರಾತ್ಮಕ ಶಕ್ತಿಯಿಂದ ಮಕ್ಕಳನ್ನು ರಕ್ಷಿಸುತ್ತದೆ.
ಬೆಡ್ ರೂಂನಲ್ಲಿ ಮೃತರ ಫೋಟೋವನ್ನು ಹಾಕಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದ್ರಿಂದ ದುಃಸ್ವಪ್ನ ಕಾಡುತ್ತದೆ.
ಸಂಪೂರ್ಣ ಕತ್ತಲಿರುವ ರೂಮಿನಲ್ಲಿ ಎಂದೂ ಮಲಗಬಾರದು. ಸಣ್ಣ ಬೆಳಕು ರೂಮನ್ನು ಆವರಿಸಿರಬೇಕು.