ವಾತಾವರಣದ ಬದಲಾವಣೆಯಿಂದಾಗಿ ಶೀತ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತದೆ. ಕೆಲವರು ದಿನಪೂರ್ತಿ ಆರೋಗ್ಯವಾಗಿರ್ತಾರೆ. ರಾತ್ರಿಯಾದ್ರೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಇದ್ರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ಜೊತೆಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ನಿಮಗೂ ರಾತ್ರಿ ಕೆಮ್ಮು ಕಾಡ್ತಾ ಇದ್ದರೆ ಈ ಮದ್ದು ಬಳಸಿ ಆರಾಮಾಗಿ ನಿದ್ರೆ ಮಾಡಿ.
ಗಾರ್ಗಲ್ : ರಾತ್ರಿ ಮಲಗುವ ಮೊದಲು ಉಗುರು ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸಿ. ಗಾರ್ಗಲ್ ಮಾಡುವುದರಿಂದ ಗಂಟಲಿನಲ್ಲಿ ಕಾಣಿಸಿಕೊಳ್ಳುವ ನೋವು ಕಡಿಮೆಯಾಗುತ್ತದೆ. ಕೆಮ್ಮು ಬರುವುದಿಲ್ಲ.
ಹರ್ಬಲ್ ಟೀ : ಕೆಮ್ಮಿಗೆ ಅಲರ್ಜಿ ಕೂಡ ಕಾರಣ. ಪ್ರತಿ ದಿನ ರಾತ್ರಿ ಮಲಗುವ ಮೊದಲು ಹರ್ಬಲ್ ಟೀ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ಜೊತೆಗೆ ಸುಖ ನಿದ್ರೆ ನಿಮ್ಮದಾಗುತ್ತದೆ.
ಮಲಗುವ ವಿಧಾನ ಬದಲಿಸಿ : ರಾತ್ರಿ ಮಗ್ಗಲು ಬದಲಾಯಿಸುತ್ತಿರಿ. ಒಂದೇ ಮಗ್ಗಲಿನಲ್ಲಿ ಮಲಗುವುದರಿಂದ ಕೆಮ್ಮು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮಲಗುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ರಾತ್ರಿ ಮೊಸರು ಬೇಡ : ಊಟದಲ್ಲಿಯೂ ಬದಲಾವಣೆ ತನ್ನಿ. ರಾತ್ರಿ ಮೊಸರು ಬಳಸಬೇಡಿ. ಜೀರ್ಣ ಕ್ರಿಯೆ ಸರಿಯಾಗಿ ಆಗದೆ ಕೆಮ್ಮು ಕಾಣಿಸಿಕೊಳ್ಳುತ್ತದೆ.
ಬೆಚ್ಚಗಿನ ನೀರು ಸೇವಿಸಿ : ಚಳಿಗಾಲದಲ್ಲಿ ಬೆಚ್ಚಗಿನ ನೀರು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದ್ರಿಂದ ಗಂಟಲು ನೋವು ಕಡಿಮೆಯಾಗುವ ಜೊತೆಗೆ ಕೆಮ್ಮು ಕಡಿಮೆಯಾಗುತ್ತದೆ.
ವೈದ್ಯರ ಸಲಹೆ : ಒಂದು ವಾರಕ್ಕಿಂತ ಹೆಚ್ಚು ದಿನ ಕೆಮ್ಮು ಕಾಡಿದ್ರೆ ವೈದ್ಯರ ಬಳಿ ಹೋಗುವುದು ಒಳ್ಳೆಯದು.