alex Certify ರಾತ್ರಿ ಒಳ್ಳೆ ನಿದ್ದೆ ಮಾಡಲು ಇದನ್ನು ಕುಡಿದು ಮಲಗಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಒಳ್ಳೆ ನಿದ್ದೆ ಮಾಡಲು ಇದನ್ನು ಕುಡಿದು ಮಲಗಿ ನೋಡಿ

ಗಾಢ ಹಾಗೂ ಉತ್ತಮ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಆಹಾರ ಪದ್ಧತಿ ಹಾಗೂ ತಪ್ಪು ಜೀವನ ಶೈಲಿಯಿಂದಾಗಿ 7 ಗಂಟೆಗಳ ಕಾಲ ನಿದ್ರೆ ಮಾಡಲು ಸಾಧ್ಯವಾಗ್ತಿಲ್ಲ. ರಾತ್ರಿಯಲ್ಲಿ ನಿದ್ರೆ ಪೂರ್ಣಗೊಳ್ಳದಿದ್ದರೆ, ಮರುದಿನ ಇದ್ರಿಂದ ದಣಿವು ಕಾಡುತ್ತದೆ. ರಾತ್ರಿ ಗಾಢವಾದ ನಿದ್ರೆ ಬರ್ತಿಲ್ಲ ಎನ್ನುವವರು ಈ ಮನೆ ಮದ್ದನ್ನು ಬಳಸಿ.

ಆಯುರ್ವೇದದ ಪ್ರಕಾರ, ರಾತ್ರಿಯಲ್ಲಿ ಮಲಗುವ ಮೊದಲು ಜಾಯಿಕಾಯಿಯನ್ನು ಹಾಲಿನೊಂದಿಗೆ ಸೇರಿಸಿ ಕುಡಿಯುವುದು ಒಳ್ಳೆಯದು. ಕೇಸರಿ ಹಾಲನ್ನು ಕುಡಿಯುವುದು ಕೂಡ ಪ್ರಯೋಜನಕಾರಿ. ಇದು ಗಾಢ ನಿದ್ರೆಗೆ ಕಾರಣವಾಗಬಲ್ಲದು.

ಆಪಲ್ ವಿನೆಗರ್ ಬಳಸುವುದರ ಮೂಲಕ ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸಲಾಗುತ್ತದೆ. ಸೇಬಿನಲ್ಲಿ ಬಹಳಷ್ಟು ಅಮೈನೋ ಆಮ್ಲಗಳಿವೆ. ಇದು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮೆಂತ್ಯ ರಸ ಕೂಡ ಬಹಳ ಅದ್ಭುತವಾಗಿದೆ. ನಿದ್ರಾಹೀನತೆಯ ಸಮಸ್ಯೆಯನ್ನು ಇದು ತಡೆಯುತ್ತದೆ. ರಾತ್ರಿ  ನಿದ್ರೆ ಬರದಿದ್ದರೆ, ಪ್ರತಿದಿನ ಮೆಂತ್ಯ ರಸವನ್ನು ಸೇವಿಸಲು ಪ್ರಾರಂಭಿಸಿ. ಉತ್ತಮ ನಿದ್ರೆಗಾಗಿ, ನೀವು ಕೆಲವು ಮೆಂತ್ಯ ಎಲೆಗಳ ರಸವನ್ನು ಹೊರತೆಗೆದು ಆ ರಸಕ್ಕೆ ಜೇನುತುಪ್ಪವನ್ನು ಸೇರಿಸಿ ಅದನ್ನು ಸೇವಿಸಬೇಕು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...