ಎಳನೀರು ಬಹುತೇಕ ಎಲ್ಲರೂ ಇಷ್ಟಪಡುವ, ಪ್ರಪಂಚದ ಮೂಲೆ ಮೂಲೆಗಳಲ್ಲೂ ಬಳಕೆಯಾಗುವ ಅತ್ಯಂತ ಜನಪ್ರಿಯ ಪಾನೀಯ. ಎಳನೀರು ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಚರ್ಮ, ಮುಖ, ಕೂದಲಿನ ಸೌಂದರ್ಯ ಹಾಗೂ ದೇಹದ ಆರೋಗ್ಯವನ್ನು ಇದು ಕಾಪಾಡುತ್ತದೆ.
ಬೇಸಿಗೆಯಲ್ಲಿ ಎಳನೀರು ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ. ಬೀಚ್‌ಗಳಲ್ಲಿ ಸಹ ಎಳನೀರಿಗೆ ಬಹಳ ಬೇಡಿಕೆ ಇರುತ್ತದೆ. ಆದರೆ ಎಳನೀರನ್ನು ರಾತ್ರಿ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲಗಳಾಗುತ್ತವೆ.
ನಿರ್ವಿಷ: ಎಳನೀರಿನಲ್ಲಿರುವ ಎಲೆಕ್ಟ್ರೋಲೈಟ್‌ಗಳು ನಮ್ಮ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ನೀರಿನ ಕೊರತೆಯಾಗದಂತೆ ಕಾಪಾಡುತ್ತವೆ. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಒಂದು ಲೋಟ ಎಳನೀರು ಕುಡಿದರೆ ಪರಿಣಾಮ ಕೆಲವೇ ದಿನಗಳಲ್ಲಿ ದಿನಗಳಲ್ಲಿ ಗೋಚರಿಸುತ್ತದೆ.
ಹೃದ್ರೋಗ ತಡೆಗಟ್ಟುವುದು : ಎಳನೀರಿನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳು, ಪೊಟ್ಯಾಸಿಯಮ್‌ನಂತಹ ಪ್ರಮುಖ ಪೋಷಕಾಂಶಗಳಿವೆ. ಇದು ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ.
ರಕ್ತದೊತ್ತಡ ನಿಯಂತ್ರಣ : ಅಧಿಕ ರಕ್ತದೊತ್ತಡದ ಸಮಸ್ಯೆ ಹೊಂದಿರುವವರು ರಾತ್ರಿ ಎಳನೀರು ಕುಡಿಯಬೇಕು. ಇದು ಬಿಪಿಯನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವವರು ಇಮ್ಮೆ ವೈದ್ಯರ ಸಲಹೆಯನ್ನೂ ಪಡೆದುಕೊಳ್ಳಬೇಕು.
ಮೂತ್ರದ ಸೋಂಕನ್ನು ತಡೆಗಟ್ಟುತ್ತದೆ: ರಾತ್ರಿಯಲ್ಲಿ ಎಳನೀರು ಕುಡಿಯುವುದರಿಂದ ದೇಹ ನಿರ್ವಿಷಗೊಳ್ಳುತ್ತದೆ. ಇದರಿಂದಾಗಿ ಮೂತ್ರನಾಳದ ಸೋಂಕಿನ ಅಪಾಯವು ಕಡಿಮೆಯಾಗುತ್ತದೆ.
ಮೂತ್ರಪಿಂಡದ ಕಲ್ಲುಗಳಿಂದ ಪರಿಹಾರ: ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇರುವವರು ರಾತ್ರಿ ಎಳನೀರು ಕುಡಿಯಬೇಕು. ಏಕೆಂದರೆ ಅದರ ಪೌಷ್ಟಿಕಾಂಶದ ಮೌಲ್ಯವು ರಾತ್ರಿಯಿಡೀ ಪರಿಣಾಮ ಬೀರುತ್ತದೆ. ಕಿಡ್ನಿ ಕಲ್ಲಿನಿಂದಲೂ ಮುಕ್ತಿ ದೊರೆಯುತ್ತದೆ.