ಮಾನಸಿಕ ಒತ್ತಡದಿಂದಾಗಿ ಹಲವರಲ್ಲಿ ನಿದ್ರಾಹೀನತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಚೆನ್ನಾಗಿ ನಿದ್ದೆ ಮಾಡದೇ ಇದ್ರೆ ಬೇರೆ ಬೇರೆ ರೀತಿಯ ಕಾಯಿಲೆಗಳಿಗೆ ಅದು ಕಾರಣವಾಗಬಹುದು. ಹಾಗಾಗಿ ಇದಕ್ಕೆ ಬಗೆ ಬಗೆಯ ಔಷಧ ತೆಗೆದುಕೊಂಡು ನಿದ್ದೆ ಮಾಡಲು ಪ್ರಯತ್ನಿಸುವವರಿದ್ದಾರೆ.
ಈ ಔಷಧಿಗಳ ಅಡ್ಡಪರಿಣಾಮಗಳು ಸಹ ಅಪಾಯಕಾರಿ. ಹಾಗಾಗಿ ನಿಮ್ಮ ಸಮಸ್ಯೆಗೊಂದು ಖಚಿತ ಪರಿಹಾರವಿದೆ, ಕೇವಲ 10 ನಿಮಿಷಗಳಲ್ಲಿ ಅದರ ಪರಿಣಾಮವನ್ನು ನೀವು ಪರೀಕ್ಷಿಸಿಕೊಳ್ಳಬಹುದು.
ಇದು ಒಂದು ರೀತಿಯ ಪವಾಡದ ಜ್ಯೂಸ್. ಈ ಜ್ಯೂಸ್ ಕುಡಿದ್ರೆ ಕೆಲವೇ ನಿಮಿಷಗಳಲ್ಲಿ ನಿಮಗೆ ಚೆನ್ನಾಗಿ ನಿದ್ದೆ ಬರುತ್ತದೆ. ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ಈ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಟಾರ್ಟ್ ಚೆರ್ರಿ ಜ್ಯೂಸ್ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.
ಈ ರಸವನ್ನು 8 ಜನರ ಮೇಲೆ ಪರೀಕ್ಷಿಸಲಾಯಿತು. ಇವರೆಲ್ಲ ನಿದ್ರಾಹೀನತೆಯಿಂದ ಬಳಲುತ್ತಿದ್ರು. ಇವರಲ್ಲಿ ಕೆಲವರಿಗೆ ಪ್ಲಸೀಬೊ ಔಷಧ ನೀಡಿದರೆ, ಕೆಲವರಿಗೆ ಚೆರ್ರಿ ಜ್ಯೂಸ್ ನೀಡಲಾಯಿತು. ಟಾರ್ಟ್ ಚೆರ್ರಿ ರಸ ಕುಡಿದವರು 84 ನಿಮಿಷ ಹೆಚ್ಚುವರಿಯಾಗಿ ನಿದ್ದೆ ಮಾಡಿದ್ದಾರೆ.
ಚೆರ್ರಿ ರಸದಲ್ಲಿ ಪ್ರೊ ಆಂಥೋಸಯಾನಿಡಿನ್ಸ್ ಎಂಬ ನೈಸರ್ಗಿಕ ಸಸ್ಯ ಸಂಯುಕ್ತವಿದೆ. ಇದು ಸಿರೊಟೋನಿನ್ ಅನ್ನು ಬಿಡುಗಡೆ ಮಾಡುವ ಅಮೈನೋ ಆಮ್ಲ ಟ್ರಿಪ್ಟೊಫಾನ್ ಅನ್ನು ಹೆಚ್ಚಿಸುತ್ತದೆ. ಚೆರ್ರಿ ಜ್ಯೂಸ್‌ಗೆ ಸಕ್ಕರೆಯನ್ನು ಸೇರಿಸಬೇಡಿ. ಸಕ್ಕರೆ ಬೆರೆಸಿದರೆ ಈ ಜ್ಯೂಸ್ ಕೆಲಸ ಮಾಡುವುದಿಲ್ಲ. ತ್ವರಿತವಾಗಿ ನಿದ್ರಿಸಲು, ರಾತ್ರಿ ಮಲಗುವ ಮೊದಲು ಭಾರೀ ಆಹಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಬೇಗನೆ ಮಲಗಿದರೆ ಉತ್ತಮ. ಪ್ರತಿದಿನವೂ ಅದೇ ಸಮಯಕ್ಕೆ ಮಲಗಲು ಹೋಗಿ. ರಾತ್ರಿ ಕೆಫಿನ್‌ಯುಕ್ತ ಪದಾರ್ಥಗಳನ್ನು ಸೇವಿಸಬೇಡಿ.