ಅಕ್ಕಿ ಭಾರತದ ಬಹು ಮುಖ್ಯ ಆಹಾರ. ಅನ್ನವನ್ನ ಮಾಡಬಹುದು ಜೊತೆಗೆ ಚೆನ್ನಾಗಿ ಜೀರ್ಣಿಸಿಕೊಳ್ಳಬಲ್ಲ ಆಹಾರ ಇದು. ಅಕ್ಕಿಯನ್ನು ನಾವು ವಿವಿಧ ರೀತಿಯಲ್ಲಿ ಸೇವನೆ ಮಾಡಬಹುದು. ಬಗೆ ಬಗೆಯ ರೈಸ್ ಐಟಂಗಳು, ಅನ್ನ ಸಾಂಬಾರ್, ಅನ್ನ ದಾಲ್ ಇವೆಲ್ಲ ಅತ್ಯಂತ ಜನಪ್ರಿಯ ತಿನಿಸುಗಳು. ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳ ಜೊತೆಗೆ ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಸಹ ಇದೆ. ಹಾಗಾಗಿ ರಾತ್ರಿ ವೇಳೆ ಅನ್ನ ತಿನ್ನಬೇಕೋ ಬೇಡವೋ ಅನ್ನೋದು ಬಹುತೇಕರನ್ನು ಕಾಡುವ ಗೊಂದಲ.
ಅಕ್ಕಿಯಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶವಿದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಇದರಿಂದ ನಮ್ಮ ದೈನಂದಿನ ಕೆಲಸಗಳು ಸುಲಭವಾಗುತ್ತದೆ. ಅನ್ನ ಉದರಕ್ಕೆ ತುಂಬಾ ಪ್ರಯೋಜನಕಾರಿ.
ಚೆನ್ನಾಗಿ ಬೇಯಿಸಿದ ಅನ್ನ ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆನೋವು ಮತ್ತು ಅಜೀರ್ಣ ಸಮಸ್ಯೆಗೆ ಅನ್ನ ಪರಿಹಾರ ನೀಡುತ್ತದೆ. ಅದಕ್ಕಾಗಿಯೇ ಹೊಟ್ಟೆಯ ಸಮಸ್ಯೆ ಆದಾಗ ಅನ್ನ ಮತ್ತು ಮೊಸರು ತಿನ್ನಲು ಅನೇಕ ಬಾರಿ ವೈದ್ಯರು ಸಲಹೆ ನೀಡುತ್ತಾರೆ. ಅನ್ನವು ಜೀರ್ಣಾಂಗ ವ್ಯವಸ್ಥೆಗೂ ತುಂಬಾ ಒಳ್ಳೆಯದು. ಇದರಿಂದಾಗಿ ಪೋಷಕಾಂಶಗಳು ದೇಹದ ಎಲ್ಲಾ ಭಾಗಗಳನ್ನು ತಲುಪುತ್ತದೆ ಮತ್ತು ಅವು ತನ್ನ ಕಾರ್ಯವನ್ನು ಸಹ ಸರಾಗವಾಗಿ ನಿರ್ವಹಿಸುತ್ತವೆ.
ದುರ್ಬಲ ಜೀರ್ಣಾಂಗ ವ್ಯವಸ್ಥೆಯನ್ನು ಸಹ ಅನ್ನ ಬಲಪಡಿಸುತ್ತದೆ. ಅನ್ನದಲ್ಲಿ ಇಷ್ಟೆಲ್ಲಾ ಅನುಕೂಲಗಳಿವೆ. ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ನೀವು ರಾತ್ರಿ ವೇಳೆ ಅನ್ನ ಅಥವಾ ಅಕ್ಕಿಯಿಂದ ಮಾಡಿದ ತಿನಿಸುಗಳನ್ನು ಸೇವಿಸಬಾರದು. ನೀವು ತೂಕ ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿದ್ದರೆ ರಾತ್ರಿ ಅನ್ನ ಸೇವಿಸಬೇಡು. ರಾತ್ರಿ ಬ್ರೌನ್ ರೈಸ್ ತಿನ್ನುವುದು ಸೂಕ್ತ. ಇದರಿಂದ ಕಾರ್ಬೋಹೈಡ್ರೇಟ್ ಬದಲಿಗೆ ಫೈಬರ್ ಅಂಶ ನಿಮ್ಮ ದೇಹ ಸೇರುತ್ತದೆ. ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಕೂಡ ಸೇರ್ಪಡೆಯಾಗುತ್ತದೆ.