ಚಿಲಿಯ ರಾಜಧಾನಿ ಸ್ಯಾಂಟಿಯಾಗೊದಲ್ಲಿ ರಾತ್ರಿಯ ಆಕಾಶದಲ್ಲಿ ಪ್ರಕಾಶಮಾನವಾದ ಉಲ್ಕೆಯೊಂದು ಬೆಳಗಿದ ಅದ್ಭುತ ದೃಶ್ಯ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಕಾನ್ಸೆಪ್ಸಿಯಾನ್ ವಿಶ್ವವಿದ್ಯಾಲಯದ ವಿದ್ವಾಂಸರು ಈ ವಿದ್ಯಮಾನವನ್ನು ದೃಢಪಡಿಸಿದ್ರು. ವರದಿಗಳ ಪ್ರಕಾರ, ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಒಂದು ಸಣ್ಣ ಕಲ್ಲು ಸುಟ್ಟುಹೋಗಿದ್ದು, ಇದು ಪಟಾಕಿ ರೀತಿ ಗೋಚರಿಸಿದೆ.
ಜುಲೈ 7 ರಂದು ಸ್ಯಾಂಟಿಯಾಗೊದ ವಿವಿಧ ಸ್ಥಳಗಳಿಂದ ಉಲ್ಕೆಯನ್ನು ವೀಕ್ಷಿಸಲಾಯಿತು. ಆಂಡಿಸ್ ಪ್ರದೇಶದಲ್ಲಿ ಕಣ್ಮರೆಯಾಗುವ ಮೊದಲು ಉಲ್ಕೆಯು ಹಲವಾರು ಭಾಗಗಳಾಗಿ ವಿಭಜನೆಯಾಯಿತು. ವರದಿಯೊಂದರ ಪ್ರಕಾರ ನಗರದ ನಿವಾಸಿಗಳಿಗೆ ಗುಡುಗು ಉಂಟಾದಂತೆ ಉಲ್ಕೆಯ ಶಬ್ಧ ಕೇಳಿಬಂದಿದೆ.
ಚಿಲಿಯ ಖಗೋಳಶಾಸ್ತ್ರಜ್ಞ ಜುವಾನ್ ಕಾರ್ಲೋಸ್ ಬೀಮಿನ್, ಸ್ಯಾಂಟಿಯಾಗೊವನ್ನು ದಾಟಿದ ಉಲ್ಕೆಯನ್ನು ಟಿ12.ಸಿಎಎಲ್ ಅಂತಾ ಕರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು. ಈ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗುತ್ತಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಉಲ್ಕೆಯು ಆಕಾಶದ ಮೇಲೆ ಅಡ್ಡಲಾಗಿ ಬೃಹತ್ ವಿದ್ಯುತ್ ಶಕ್ತಿಯಂತೆ ನಗರವನ್ನು ಬೆಳಗಿಸುವುದನ್ನು ನೋಡಿದ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.
https://youtu.be/ne7j9RQOchE