
ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ನಂದಕಿಶೋರ್ ನಿರ್ದೇಶನದ ಬಹುನಿರೀಕ್ಷಿತ ರಾಣ ಚಿತ್ರದ ‘ಗಲ್ಲಿ ಬಾಯ್’ ಎಂಬ ವಿಡಿಯೋ ಹಾಡು ನಾಳೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದ್ದು, ಖ್ಯಾತ ನಿರ್ದೇಶಕ ಪ್ರೇಮ್ ಈ ಹಾಡನ್ನು ಲಾಂಚ್ ಮಾಡಲಿದ್ದಾರೆ.
ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದೆ. ಅನಿರುದ್ದ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಧ್ವನಿಯಾಗಿರುವ ಈ ಹಾಡಿಗೆ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.
ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಟನೆಯ ಈ ಚಿತ್ರದಲ್ಲಿ ಶ್ರೇಯಸ್ ಗೆ ಜೋಡಿಯಾಗಿ ರೇಷ್ಮಾ ನಾಣಯ್ಯ ಅಭಿನಯಿಸಿದ್ದು, ಗುಜ್ಜಲ್ ಟಾಕೀಸ್ ಬ್ಯಾನರ್ ನಡಿ ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡಿದ್ದಾರೆ. ನವೆಂಬರ್ 11ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.
