ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೆನ್ನೆಗೆ ಬಾರಿಸುತ್ತಿದ್ದೆ ಎಂದು ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿದ್ದ ಕೇಂದ್ರ ಸಚಿವ ನಾರಾಯಣ ರಾಣೆಗೆ ಜಾಮೀನು ಸಿಕ್ಕ 24 ಗಂಟೆಯೊಳಗೆ ಸಿಎಂ ಉದ್ಧವ್ ವಿರುದ್ಧ ಬಿಜೆಪಿಯು ಮೂರು ದೂರುಗಳನ್ನು ಪೊಲೀಸರಿಗೆ ಸಲ್ಲಿಸಿದೆ.
ಶಿವಸೇನೆ ಮುಖವಾಣಿ “ಸಾಮ್ನಾ’ ಪತ್ರಿಕೆಯ ಸಂಪಾದಕಿ ಆಗಿರುವ ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಹಾಗೂ ಯುವಸೇನಾ ಅಧ್ಯಕ್ಷ ವರುಣ್ ಸರ್ದೇಸಾಯಿ ವಿರುದ್ಧವೂ ಬಿಜೆಪಿ ಪೊಲೀಸರಿಗೆ ದೂರು ಸಲ್ಲಿಸಿದೆ.
ಅದು ಕೂಡ ರಾಣೆ ಅವರನ್ನು ಬಂಧಿಸಿರುವ ನಾಸಿಕ್ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಗೇ ಸಿಎಂ ಉದ್ಧವ್ ವಿರುದ್ಧ ದೂರು ನೀಡಲಾಗಿರುವುದು ಗಮನಾರ್ಹ.
ಬಿಗ್ ನ್ಯೂಸ್: BJP – RSS ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದಿಲ್ಲವೆಂದ ಸಚಿವರು
ಕೆಲ ವರ್ಷಗಳ ಹಿಂದೆ ದಸರಾ ಭಾಷಣ ವೇಳೆ ಉದ್ಧವ್ ಠಾಕ್ರೆ ಅವರು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಅನಿಸುತ್ತಿದೆ ಎಂದಿದ್ದರು. ಈ ವಿಡಿಯೊ ಸದ್ಯ ವೈರಲ್ ಆಗಿದೆ. ಈ ಹೇಳಿಕೆ ಪ್ರಚೋದನಕಾರಿ ಎಂದು ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ನಿತಿನ್ ಭುತಡಾ ಪೊಲೀಸರಿಗೆ ದೂರು ನೀಡಿದ್ದಾರೆ.