ರಾಜ್ಯ ರಾಜಧಾನಿಯಲ್ಲಿ ಕಾಂಗ್ರೆಸ್ – ಬಿಜೆಪಿ ಪೋಸ್ಟರ್ ಸಮರ; PAY CM ಗೆ ಪ್ರತಿಯಾಗಿ ರೀಡೂ ಸಿದ್ದರಾಮಯ್ಯ – ಇಡಿ ಡಿಕೆಶಿ ಅಭಿಯಾನ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೋಸ್ಟರ್ ಸಮರ ನಡೆದಿದ್ದು, ಕಾಂಗ್ರೆಸ್ಸಿನವರ ‘ಪೇ ಸಿಎಂ’ ಗೆ ಪ್ರತಿಯಾಗಿ ಬಿಜೆಪಿ, ರೀಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಪೋಸ್ಟರ್ ಹಾಕಿದೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಶೇಕಡ 40 ಕಮಿಷನ್ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು ನಗರದಾದ್ಯಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರದೊಂದಿಗೆ ‘ಪೇ ಸಿಎಂ’ ಎಂಬ ಪೋಸ್ಟರ್ ಹಾಕಿದ್ದರು.
ಇದಾದ ಬಳಿಕ ಬಿಜೆಪಿ ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನವರು ಡಿ ನೋಟಿಫಿಕೇಶನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೀಡೂ ಸಿದ್ದರಾಮಯ್ಯ ಹಾಗೂ ಜಾರಿ ನಿರ್ದೇಶನಾಲಯದಿಂದ ಡಿಕೆ ಶಿವಕುಮಾರ್ ವಿಚಾರಣೆ ಎದುರಿಸುತ್ತಿರುವ ಕಾರಣ ‘ಇಡಿ ಡಿಕೆಶಿ’ ಪೋಸ್ಟರ್ ಹಾಕಿದ್ದಾರೆ. ಈ ಎರಡೂ ಪೋಸ್ಟರ್ಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.