alex Certify ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಆಘಾತಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಆಘಾತಕಾರಿ ಮಾಹಿತಿ ಬಹಿರಂಗ

ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಆಘಾತಕಾರಿ ಮಾಹಿತಿಯೊಂದು ಹೊರ ಬಿದ್ದಿದ್ದು, ಕೇವಲ 6 ವರ್ಷಗಳಲ್ಲಿ 510 ಜನ ಮಕ್ಕಳು ಬಾಲ ಮಂದಿರದಿಂದ ಕಾಣೆಯಾಗಿದ್ದಾರೆ.

ಇನ್ನೂ ದುರಂತದ ಸಂಗತಿ ಎಂದರೆ, ಕಾಣೆಯಾದವರ ಪೈಕಿ ಅತೀ ಹೆಚ್ಚು ಮಕ್ಕಳು ಬಾಲಕಿಯರೇ ಆಗಿದ್ದಾರೆ ಎನ್ನುವುದು. ಇಲ್ಲಿಯವರೆಗೂ ಆ ಮಕ್ಕಳ ಕುರಿತು ಸರ್ಕಾರಕ್ಕೆ ಮಾಹಿತಿ ಸಿಕ್ಕಿಲ್ಲ ಎನ್ನುವುದು ಮಾತ್ರ ನೋವಿನ ಹಾಗೂ ಆತಂಕದ ಸಂಗತಿಯಾಗಿದೆ.

ಶಾಕಿಂಗ್​​: ತವರು ಮನೆಗೆ ಹೋಗುತ್ತಾಳೆಂದು ಪತ್ನಿಯ ಕತ್ತನ್ನೇ ಸೀಳಿದ ಪಾಪಿ ಪತಿ…!

ರಾಜ್ಯದಲ್ಲಿನ ಬಹುತೇಕ ಜಿಲ್ಲೆಗಳಲ್ಲಿನ ಮಕ್ಕಳು ನಾಪತ್ತೆಯಾಗಿದ್ದಾರೆ. ಬಾಲ ಮಂದಿರದಲ್ಲಿ 16 ರಿಂದ 18 ವರ್ಷದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಈ ವಯಸ್ಸಿನ ಬಾಲಕಿಯರು ಕಾಣೆಯಾಗಿದ್ದಾರೆ ಎಂದರೆ, ಅವರು ಹದಿ ಹರೆಯದ ವಯಸ್ಸಿನವರೇ ಇರುತ್ತಾರೆ. ಇದರಿಂದಾಗಿ ಸಾಮಾಜಿಕ ವಲಯದಲ್ಲಿ ಸಹಜವಾಗಿ ಆತಂಕ ಮನೆ ಮಾಡುತ್ತಿದೆ.

ಇದನ್ನು ಗಮನಿಸಿದರೆ ಬಾಲ ಮಂದಿರಗಳಲ್ಲಿ ಭದ್ರತೆ ಸರಿಯಾಗಿಲ್ಲವೋ? ಅಥವಾ ವ್ಯವಸ್ಥೆ ಸರಿಯಾಗಿಲ್ಲವೋ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಇನ್ನಾದರೂ ಸರ್ಕಾರ ಬಾಲ ಮಂದಿರದಲ್ಲಿನ ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸುವ ಅಗತ್ಯತೆ ಇದೆ ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...