
ದೇಶದ 15 ರಾಜ್ಯಗಳಲ್ಲಿ ಒಟ್ಟು 57 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯಬೇಕಿತ್ತಾದರೂ 11 ರಾಜ್ಯಗಳ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಹೀಗಾಗಿ ಕರ್ನಾಟಕವೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ 16 ಸ್ಥಾನಗಳಿಗೆ ಶುಕ್ರವಾರದಂದು ಚುನಾವಣೆ ನಡೆದಿತ್ತು.
ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಇಂತಿದೆ.
ಕರ್ನಾಟಕ ನಾಲ್ಕು ಸ್ಥಾನಗಳ ಪೈಕಿ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್ (ಬಿಜೆಪಿ) ಹಾಗೂ ಜೈರಾಂ ರಮೇಶ್ (ಕಾಂಗ್ರೆಸ್) ಗೆಲುವು ಸಾಧಿಸಿದ್ದಾರೆ.
ಮಹಾರಾಷ್ಟ್ರದ ಆರು ಸ್ಥಾನಗಳ ಪೈಕಿ ಪಿಯೂಷ್ ಗೋಯೆಲ್, ಅನಿಲ್ ಬೊಂಡೆ, ಧನಂಜಯ್ ಮಹಾದಿಕ್ (ಬಿಜೆಪಿ), ಸಂಜಯ್ ರಾವತ್ (ಶಿವಸೇನೆ), ಪ್ರಫುಲ್ ಪಟೇಲ್ (ಎನ್.ಸಿ.ಪಿ.) ಹಾಗೂ ಇಮ್ರಾನ್ ಪ್ರತಾಪಗಢಿ (ಕಾಂಗ್ರೆಸ್) ಗೆಲುವು ಸಾಧಿಸಿದ್ದಾರೆ.
ರಾಜಸ್ಥಾನದ ನಾಲ್ಕು ಸ್ಥಾನಗಳ ಪೈಕಿ ಪ್ರಮೋದ್ ತಿವಾರಿ, ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ (ಕಾಂಗ್ರೆಸ್) ಹಾಗೂ ಘನಶ್ಯಾಮ್ ತಿವಾರಿ (ಬಿಜೆಪಿ) ಜಯ ಸಾಧಿಸಿದ್ದಾರೆ.
ಹರಿಯಾಣದ ಎರಡು ಸ್ಥಾನಗಳ ಪೈಕಿ ಕೃಷ್ಣಲಾಲ್ ಪನ್ವರ್ (ಬಿಜೆಪಿ) ಹಾಗೂ ಕಾರ್ತೀಕೇಯ ಶರ್ಮಾ (ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ) ಜಯ ಸಾಧಿಸಿದ್ದಾರೆ.