alex Certify ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ: ಮೂರು ಸ್ಥಾನಗಳಿಗೆ ನಿರೀಕ್ಷೆಯಂತೆ ಬಿಜೆಪಿಯ ಇಬ್ಬರು – ಕಾಂಗ್ರೆಸ್‌ ನ ಒಬ್ಬರು ಆಯ್ಕೆ; ಕುತೂಹಲದಲ್ಲಿ ನಾಲ್ಕನೇ ಅಭ್ಯರ್ಥಿ ಗೆಲುವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ: ಮೂರು ಸ್ಥಾನಗಳಿಗೆ ನಿರೀಕ್ಷೆಯಂತೆ ಬಿಜೆಪಿಯ ಇಬ್ಬರು – ಕಾಂಗ್ರೆಸ್‌ ನ ಒಬ್ಬರು ಆಯ್ಕೆ; ಕುತೂಹಲದಲ್ಲಿ ನಾಲ್ಕನೇ ಅಭ್ಯರ್ಥಿ ಗೆಲುವು

ಇಂದು ನಡೆದ ರಾಜ್ಯಸಭಾ ಚುನಾವಣಾ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದ್ದು, ನಿರೀಕ್ಷೆಯಂತೆ ಬಿಜೆಪಿಯ ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌ ಹಾಗೂ ಕಾಂಗ್ರೆಸ್‌ ನ ಜಯರಾಂ ರಮೇಶ್‌ ಮೊದಲ ಸುತ್ತಿನಲ್ಲೇ ಆಯ್ಕೆಯಾಗಲಿದ್ದಾರೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಆರು ಮಂದಿ ಅಭ್ಯರ್ಥಿಗಳು ಕಣಕ್ಕಿಳಿದಾಗಲೇ ಅಡ್ಡ ಮತದಾನ ನಡೆಯಬಹುದೆಂಬ ಅನುಮಾನ ಮೂರು ಪಕ್ಷಗಳನ್ನೂ ಕಾಡಿದ್ದು, ಇದು ಚುನಾವಣಾ ಫಲಿತಾಂಶದ ಬಳಿಕ ನಿಜವಾಗಿದೆ.

ಇಂದು ಮತದಾನ ನಡೆಯುವಾಗಲೇ ಜೆಡಿಎಸ್‌ ನ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್‌ ಗೌಡ ತಾವು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಿರುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಬಳಿಕ ಮಾತನಾಡಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಪಕ್ಷದ ಇನ್ನೂ ಕೆಲವರು ಅಡ್ಡ ಮತದಾನ ಮಾಡಿರಬಹುದೆಂಬ ಅನುಮಾನವಿದೆ ಎಂದಿದ್ದರು. ಈ ಚುನಾವಣಾ ಫಲಿತಾಂಶದಿಂದ ಅದೀಗ ನಿಜವಾದಂತಾಗಿದೆ.

ನಾಲ್ಕನೇ ಅಭ್ಯರ್ಥಿಯಾಗಿ ಬಿಜೆಪಿಯ ಲೆಹರ್‌ ಸಿಂಗ್‌ ಗೆಲುವು ಸಾಧಿಸಿದ್ದಾರೆ ಎಂದು ಹೇಳಲಾಗಿದ್ದು, ಅಧಿಕೃತ ಫಲಿತಾಂಶದ ಬಳಿಕ ಇದು ತಿಳಿದುಬರಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...