ನವದೆಹಲಿ: ಕೇರಳ ಹಾಗೂ ಪಶ್ಚಿಮ ಬಂಗಾಳದ ಖಾಲಿ ಇರುವ ಎರಡು ಸ್ಥಾನಗಳಿಗೆ ಉಪಚುನಾವಣಾ ದಿನಾಂಕ ಘೋಷಣೆಯಾಗಿದ್ದು, ನವೆಂಬರ್ 29 ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕೇರಳದ ಕಾಂಗ್ರೆಸ್ ನಾಯಕ ಜೋಸೆ ಕೆ ಮಣಿ ಹಾಗೂ ಪಶ್ಚಿಮ ಬಂಗಾಳದ ರಾಜ್ಯಸಭಾ ಸದಸ್ಯೆ ಟಿಎಂಸಿಯ ಅರ್ಪಿತಾ ಘೋಷ್ ರಾಜೀನಾಮೆಯಿಂದ ತೆರವಾಗಿದ್ದ ಎರಡು ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ.
ಕಡಿಮೆ ಖರ್ಚಿನಲ್ಲಿ ಈ ‘ಬ್ಯುಸಿನೆಸ್’ ಶುರು ಮಾಡಿ ಗಳಿಸಿ ಲಕ್ಷಾಂತರ ಹಣ
ರಾಜ್ಯ ಸಭೆಯ ಎರಡು ಸ್ಥಾನಗಳಿಗಾಗಿ ಉಪಚುನಾವಣೆಗೆ ನವೆಂಬರ್ 9ರಂದು ಅಧಿಸೂಚನೆ ಹೊರಡಿಸಲಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ನ.16 ಕೊನೇ ದಿನ. ನ.29ರಂದು ಬೆಳಿಗ್ಗೆ 9ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ. ಮತದಾನ ಅಂತ್ಯವಾದ ಒಂದೇ ಗಂಟೆಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.