ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಇಲ್ಲಿದೆ. ಕರಾವಳಿ, ಮಲೆನಾಡು ಸೇರಿದಂತೆ ಲಕ್ಷಾಂತರ ರೈತರ ಪ್ರಮುಖ ಬೇಡಿಕೆಯೊಂದು ಶೀಘ್ರದಲ್ಲೇ ಈಡೇರಲಿದೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುತ್ತೂರಿನಲ್ಲಿ ಈ ವಿಷಯ ತಿಳಿಸಿದ್ದು, ರಾಜ್ಯದ ಲಕ್ಷಾಂತರ ರೈತರ ಬೇಡಿಕೆಯಂತೆ ಮುಂದಿನ ಒಂದೂವರೆ ತಿಂಗಳಲ್ಲಿ ರೈತರಿಗೆ ಅವರ ಕುಮ್ಕಿ ಜಮೀನಿನ ಹಕ್ಕು ಸಿಗಲಿದೆ ಎಂದು ತಿಳಿಸಿದ್ದಾರೆ.
ಕುಮ್ಕಿ ಹಕ್ಕು ನೀಡುವ ಕುರಿತಂತೆ ವಿಧಾನಸಭೆಯಲ್ಲೂ ಸಹ ಚರ್ಚೆ ನಡೆದಿದ್ದು, ಬಳಿಕ ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು. ಇದೀಗ ಮುಂದಿನ ಒಂದೂವರೆ ತಿಂಗಳಲ್ಲಿ ರೈತರಿಗೆ ಅವರ ಕುಮ್ಕಿ ಜಮೀನಿನ ಹಕ್ಕು ಸಿಗಲಿದೆ ಎಂದು ತಿಳಿದುಬಂದಿದೆ.