ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. ಎಂಡೋಸಲ್ಫಾನ್ ಪೀಡಿತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಬಕ ಗ್ರಾಮದಲ್ಲಿ ನಡೆದಿದೆ.
20 ವರ್ಷದ ಯುವಕನ ಮೇಲೆ ಮುರ ರೈಲ್ವೆ ಕ್ರಾಸ್ ಬಳಿ ಕಾಮುಕ ಅಟ್ಟಹಾಸ ಮೆರೆದಿದ್ದಾನೆ ಎಂದು ದೂರು ದಾಖಲಾಗಿದೆ. ಈ ಕುರಿತು ಸಂತ್ರಸ್ತ ಯುವಕನ ತಂದೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಕ್ಷಿಗಳಿಂದ ಬೇಳೆ ರಕ್ಷಿಸಲು ರೈತ ಮಾಡಿದ್ದಾನೆ ಈ ಪ್ಲಾನ್
ಮಗನ ಬಟ್ಟೆ ಮಣ್ಣಾಗಿದ್ದರಿಂದ ವಿಚಾರಿಸಿದಾಗ, ತನ್ನ ಮೇಲೆ ಮೊಹಮ್ಮದ್ ಹನೀಫ್ ಎಂಬಾತ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಮಗ ತಿಳಿಸಿದ್ದಾನೆ. ಕಬ್ಬು ಕೊಡಿಸುವುದಾಗಿ ನಂಬಿಸಿ ಪೊದೆಗೆ ಕರೆದೊಯ್ದು ಕೃತ್ಯವೆಸಗಲಾಗಿದೆ ಎಂದು ತಂದೆ ಬಳಿ ಅಳಲು ತೋಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.