ಬೆಂಗಳೂರು: ವಿದ್ಯುತ್ ದರ ಏರಿಕೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಹೋಟೆಲ್ ತಿಂಡಿ-ತಿನಿಸುಗಳ ದರ ಏರಿಕೆ ಶಾಕ್ ಬೆನ್ನಲ್ಲೇ ಇದೀಗ ಖಾಸಗಿ ಬಸ್ ಟಿಕೆಟ್ ಹಾಗೂ ಪ್ರವಾಸಿ ಟ್ಯಾಕ್ಸಿ ವಾಹನಗಳ ಬಾಡಿಗೆ ಕೂಡ ಹೆಚ್ಚಿಸಲು ಚಿಂತನೆ ನಡೆದಿದೆ.
ಪೆಟ್ರೋಲ್, ಡೀಸೆಲ್ ದರ ಪ್ರತಿದಿನ ಹೆಚ್ಚುತ್ತಿರುವುದರಿಂದ ಖಾಸಗಿ ಬಸ್ ಪ್ರಯಾಣ ದರವನ್ನು ಶೇ.10ರಷ್ಟು ಹೆಚ್ಚಿಸಲು ಖಾಸಗಿ ವಾಹನ ಸಂಘಟನೆಗಳು ನಿರ್ಧರಿಸುವೆ.
ಗಿಫ್ಟ್ ಕೊಟ್ಟಿದ್ದ ಫೋನ್ ವಾಪಸ್ ಕೊಡದೇ ಇದ್ದಿದ್ದಕ್ಕೆ ಪ್ರಿಯಕರ ಮಾಡಿದ್ದಾನೆ ಇಂಥಾ ಕ್ರೂರ ಕೃತ್ಯ
ಪ್ರವಾಸಿ ಟ್ಯಾಕ್ಸಿ ವಾಹನಗಳ ಬಾಡಿಗೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಬೆಲೆ ಏರಿಕೆ ನಡುವೆ ವಾಹನ ಬಾಡಿಗೆ ದರ ಹೆಚ್ಚಿಸದಿದ್ದರೆ ಬದುಕು ನಡೆಸುವುದು ದುಸ್ತರವಾಗಲಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ ತಿಳಿಸಿದ್ದಾರೆ.