ಕೊರೊನಾ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನ್ಲಾಕ್ 4.0 ಜಾರಿಗೆ ಚಿಂತನೆ ನಡೆಸಿದೆ. ಜುಲೈ 19ರಿಂದ ಅನ್ಲಾಕ್ 4.0 ಜಾರಿಗೆ ಬರಲಿದ್ದು ಈ ಮೂಲಕ ಸದ್ಯ ಚಾಲ್ತಿಯಲ್ಲಿರುವ ನೈಟ್ ಕರ್ಫ್ಯೂಗೂ ಸರ್ಕಾರ ಇತಿಶ್ರೀ ಹೇಳುವ ಸಾಧ್ಯತೆ ಇದೆ.
ಅನ್ಲಾಕ್ 3.0ದಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂವನ್ನ ತೆರವುಗೊಳಿಸಿತ್ತು. ಹೀಗಾಗಿ ಸದ್ಯ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಕೂಡ ಮುಂದಿನ ವಾರದಿಂದ ತೆರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕ ಅನ್ಲಾಕ್ 3.0 ಅಡಿಯಲ್ಲಿ ಈಗಾಗಲೇ ರಾಜ್ಯದಲ್ಲಿ ಮಾಲ್, ರೆಸ್ಟೋರೆಂಟ್, ಹೋಟೆಲ್, ಕಂಪನಿ ಹಾಗೂ ದೇವಸ್ಥಾನಗಳನ್ನ ತೆರೆಯಲಾಗಿದೆ. ಇದೀಗ ಅನ್ಲಾಕ್ 4.0ನ ಅಡಿಯಲ್ಲಿ ಪಬ್ಗಳೂ ಸಹ ಪುನಾರಂಭಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
BIG NEWS: ಸೆ. 11 ರಂದು ನಡೆಯಲಿದೆ NEET PG ಪರೀಕ್ಷೆ
ಲಾಕ್ಡೌನ್ 3.0 ಸಮಯದಲ್ಲಿ ಮಾಲ್ಗಳ ಪುನಾರಂಭಕ್ಕೆ ಸಿಎಂ ಯಡಿಯೂರಪ್ಪ ಅವಕಾಶ ನೀಡಿದ್ದರೂ ಸಹ ಚಿತ್ರ ಮಂದಿರಗಳನ್ನ ತೆರವು ಮಾಡಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಈ ಬಾರಿಯ ಅನ್ಲಾಕ್ನಲ್ಲಿ ಸೀಮಿತ ಸಂಖ್ಯೆಯ ಪ್ರೇಕ್ಷಕರೊಂದಿಗೆ ಚಿತ್ರ ಮಂದಿರವನ್ನ ಆರಂಭ ಮಾಡ್ತಾರಾ ಎಂಬ ಕುತೂಹಲ ಕೂಡ ಇದೆ.
ಅತಿಯಾದ ಜನದಟ್ಟಣೆಯನ್ನ ಗಮನಿಸಿದ ಬಳಿಕ ಬೆಂಗಳೂರು ಹೊರವಲಯದಲ್ಲಿರುವ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೊರಡಿಸಿರುವ ಆದೇಶದ ಪ್ರಕಾರ ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.