alex Certify ರಾಜ್ಯದಲ್ಲಿ, ಕೊರೋನಾ ಲಕ್ಷಣರಹಿತ ರೋಗಿಗಳ ಪೂರ್ವ ಪರೀಕ್ಷೆ ಸ್ಥಗಿತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ, ಕೊರೋನಾ ಲಕ್ಷಣರಹಿತ ರೋಗಿಗಳ ಪೂರ್ವ ಪರೀಕ್ಷೆ ಸ್ಥಗಿತ….!

ರಾಜ್ಯದಲ್ಲಿ ಕೊರೋನಾವೈರಸ್ ಪ್ರಕರಣಗಳು ಇಳಿಮುಖವಾಗುತ್ತಿವೆ. ಈ ಸಂದರ್ಭದಲ್ಲಿ ರಾಜ್ಯದ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳು, ರೋಗಿಗಳು ಆಸ್ಪತ್ರೆಗೆ ದಾಖಲಾಗಲು, ಶಸ್ತ್ರಚಿಕಿತ್ಸೆಗಳು, ಸ್ಕ್ಯಾನಿಂಗ್ ಮತ್ತು ಇತರ ವೈದ್ಯಕೀಯ ಪ್ರಕ್ರಿಯೆಗಳಿಗೆ ಮೊದಲು, ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿವೆ.

ಇನ್ಮುಂದೆ ಲಕ್ಷಣರಹಿತ ರೋಗಿಗಳಿಗೆ ಈ ಪೂರ್ವ ಪರೀಕ್ಷೆ ಅಗತ್ಯವಿಲ್ಲ, ರೋಗಲಕ್ಷಣವಿಲ್ಲದ ರೋಗಿಗಳು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬೇಕಿಲ್ಲ ಎಂದು ಆರೋಗ್ಯ ಸಚಿವ ಡಾ ಸುಧಾಕರ್, ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಜೊತೆಗೆ ಸರ್ಕಾರಿ ಸೇರಿದಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಗು ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ನಿಯಮ ಕೇವಲ ಲಕ್ಷಣರಹಿತ ರೋಗಿಗಳಿಗೆ ಮಾತ್ರವಲ್ಲ, ಈ ಮೊದಲು ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿ, ಆನಂತರ ಚೇತರಿಸಿಕೊಂಡು, ನಾನ್ ಕೋವಿಡ್ ವಾರ್ಡ್ ಗೆ ದಾಖಲಾಗಿರುವವರಿಗು ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...