ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಕುರುಡು ಕಾಂಚಣದ ಅಬ್ಬರ ಜೋರಾಗಿದ್ದು, ಅಧಿಕಾರಿಗಳು ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ವಶಪಡಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಉಡುಗೊರೆ ಸಾಮಗ್ರಿಗಳು, ಮದ್ಯ ಸಹ ಪತ್ತೆಯಾಗುತ್ತಿದೆ.
ಸೋಮವಾರ ಒಂದೇ ದಿನ 9.77 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಒಟ್ಟಾರೆ 47 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಂತಾಗಿದೆ.
ಅಲ್ಲದೆ ಚಿನ್ನ, ಬೆಳ್ಳಿ, ಕುಕ್ಕರ್ ಮಿಕ್ಸರ್ ಮೊದಲಾದ ಉಡುಗೊರೆ ಸಾಮಗ್ರಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ನಗದೂ ಸೇರಿದಂತೆ ಇವುಗಳೆಲ್ಲದರ ಮೌಲ್ಯ ಒಟ್ಟಾರೆ 126 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಹಣದ ಹರಿವು ಸಹ ಜೋರಾಗಿದ್ದು, ಪ್ರತಿನಿತ್ಯ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಲೇ ಇದ್ದಾರೆ.