
ಬೆಂಗಳೂರು: ರಾಜ್ಯದಲ್ಲಿ ಹಳೆಯ ದಾಖಲೆಗಳನ್ನೆಲ್ಲ ಹಿಂದಿಕ್ಕಿ ಕೊರೋನಾ ಸುನಾಮಿ ಎದ್ದಿದೆ. ಇವತ್ತು ಒಂದೇ ದಿನ 26,962 ಮಂದಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಇವತ್ತು ಒಂದೇ ದಿನ 190 ಸೋಂಕಿತರು ಸಾವನ್ನಪ್ಪಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 12,74,959 ಏರಿಕೆಯಾಗಿದ್ದು, ಇದುವರೆಗೆ ರಾಜ್ಯದಲ್ಲಿ ಸೋಂಕಿನಿಂದ 14,075 ಜನ ಮೃತಪಟ್ಟಿದ್ದಾರೆ. ಇವತ್ತು 8697 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 10,46,554 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 2,14,311 ಕ್ಕೆ ಏರಿಕೆಯಾಗಿದ್ದು, ಐಸಿಯುನಲ್ಲಿ 1128 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿನ ಸುನಾಮಿ ಎದ್ದಿದೆ. ಇವತ್ತು ಒಂದೇ ದಿನ 16,662 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇವತ್ತು 124 ಸೋಂಕಿತರು ಸಾವನ್ನಪ್ಪಿದ್ದು. 1,49,624 ಸಕ್ರಿಯ ಪ್ರಕರಣಗಳು ಇವೆ.

