
ರೋಟಿ, ಪರೋಟ ಮಾಡಿದಾಗ ರುಚಿ ಹಾಗೂ ಖಾರ ಖಾರವಾದ ಚಟ್ನಿ ನೆಂಚಿಕೊಳ್ಳಲು ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ರಾಜಸ್ತಾನಿ ಶೈಲಿಯ ಬೆಳ್ಳುಳ್ಳಿ ಚಟ್ನಿ ಇದೆ. ಇದನ್ನು ಅನ್ನದ ಜತೆ ಕೂಡ ನೆಂಚಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು:
ಜೀರಿಗೆ – 1 ಟೀ ಸ್ಪೂನ್, ಒಂದು ದೊಡ್ಡ ಗೆಡ್ಡೆ ಬೆಳ್ಳುಳ್ಳಿ (ಇದರ ಎಸಳು ಬೇರ್ಪಡಿಸಿಕೊಳ್ಳಿ), 6 – ಒಣಮೆಣಸು, ಖಾರದ ಪುಡಿ – 2 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಸಾಸಿವೆ – 1 ಟೀ ಸ್ಪೂನ್, ನೀರು – 1/6 ಕಪ್, ಎಣ್ಣೆ – 4 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಒಂದು ಮಿಕ್ಸಿ ಜಾರಿಗೆ ಬೆಳ್ಳುಳ್ಳಿ ಎಸಳು, ಒಣಮೆಣಸು, ಖಾರದ ಪುಡಿ, ಜೀರಿಗೆ, ಉಪ್ಪು, ನೀರು ಹಾಕಿ ಮಿಕ್ಸಿಯಲ್ಲಿ ನಯವಾಗಿ ಪೇಸ್ಟ್ ಮಾಡಿಕೊಳ್ಳಿ. ಒಂದು ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಸಾಸಿವೆ ಹಾಕಿ ನಂತರ ರುಬ್ಬಿಕೊಂಡ ಮಿಶ್ರಣ ಸೇರಿಸಿ ಹಾಗೇ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸಣ್ಣ ಉರಿಯಲ್ಲಿ ಬೇಯಿಸಿ.
ಹಸಿ ವಾಸನೆ ಹೋಗಿ ಚಟ್ನಿ ಎಣ್ಣೆ ಪಸೆ ಬಿಡುವವರಗೆ ಚೆನ್ನಾಗಿ ಮಿಕ್ಸ್ ಮಾಡಿ. ತಳ ಹತ್ತದಂತೆ ಜಾಗೃತೆ ವಹಿಸಿ. ನಂತರ ಗ್ಯಾಸ್ ಅಫ್ ಮಾಡಿ. ಚಪಾತಿ, ಪರೋಟ, ಅನ್ನದ ಜತೆ ಸವಿಯಿರಿ.