ಊಟದ ಜತೆ ಉಪ್ಪಿನಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ರಾಜಸ್ತಾನಿ ಶೈಲಿಯ ಹಸಿಮೆಣಸಿನಕಾಯಿ ಬಳಸಿ ಮಾಡುವ ಉಪ್ಪಿನಕಾಯಿ ಇದೆ. ಒಮ್ಮೆ ಮಾಡಿ ರುಚಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ½ ಕಪ್ ನಷ್ಟು ಬೀಜ ತೆಗೆದು ಸಣ್ಣಗೆ ಹೆಚ್ಚಿಟ್ಟುಕೊಂಡ ಹಸಿಮೆಣಸು, ಎಣ್ಣೆ – 2 ಟೇಬಲ್ ಸ್ಪೂನ್, ಸೋಂಪು – 1 ಟೇಬಲ್ ಸ್ಪೂನ್, ಸಾಸಿವೆ – 1 ಟೀ ಸ್ಪೂನ್, ಜೀರಿಗೆ – 1 ಟೀ ಸ್ಪೂನ್, ಅರಿಶಿನ ಪುಡಿ – 1/4 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಧನಿಯಾ ಪುಡಿ – 1 ಟೇಬಲ್ ಸ್ಪೂನ್, ಖಾರದ ಪುಡಿ – ಚಿಟಿಕೆ, ನೀರು – 2 ಟೇಬಲ್ ಸ್ಪೂನ್, ಇಂಗು – 1/4 ಟೀ ಸ್ಪೂನ್.
ಮಾಡುವ ವಿಧಾನ:
ಮೊದಲು ಒಂದು ಪ್ಯಾನ್ ಗೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿ. ಅದಕ್ಕೆ ಇಂಗು, ಸಾಸಿವೆ, ಜೀರಿಗೆ ಹಾಗೂ ಸೋಂಪು ಹಾಕಿ ಇದು ಫ್ರೈ ಆದ ಕೂಡಲೆ ಹಸಿಮೆಣಸು ಸೇರಿಸಿ 5 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಅರಿಶಿನ, ಉಪ್ಪು, ಧನಿಯಾ ಪುಡಿ, ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ಇದಕ್ಕೆ ನೀರು ಸೇರಿಸಿ 2 ನಿಮಿಷಗಳ ಕಾಲ ಮತ್ತೆ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿದರೆ ಥಟ್ಟಂತ ರೆಡಿಯಾಗುತ್ತೆ ಹಸಿಮೆಣಸಿನಕಾಯಿ ಉಪ್ಪಿನಕಾಯಿ. ಇದು ಸೈಡ್ ಡಿಶ್ ಗೆ ಚೆನ್ನಾಗಿರುತ್ತದೆ. ಫ್ರಿಡ್ಜ್ ನಲ್ಲಿ 5-6 ದಿನಗಳ ಕಾಲ ಇಡಬಹುದು.