ರಾಗಿ ಬೆಳೆದ ರೈತರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಈ ಕುರಿತ ಆದೇಶ ಏಪ್ರಿಲ್ 19ರಂದು ಹೊರಬಿದ್ದಿದೆ. ಏಪ್ರಿಲ್ 25 ರಿಂದ ರಾಗಿ ಬೆಳೆದ ರೈತರ ನೋಂದಣಿ ಕಾರ್ಯ ಆರಂಭವಾಗಲಿದ್ದು, ಒಟ್ಟು 1.14 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಸೂಚನೆ ನೀಡಲಾಗಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿ ಸಂಗ್ರಹಣಾ ಸಂಸ್ಥೆ ಕೃತಿ ಕ್ವಿಂಟಾಲ್ ಗೆ 3,377 ರೂಪಾಯಿಗಳಂತೆ ರಾಗಿ ಖರೀದಿಸಲಿದ್ದು, ಇದರಿಂದಾಗಿ ರೈತರಿಗೆ ಅನುಕೂಲಕರವಾಗಲಿದೆ. ಮುಕ್ತಮಾರುಕಟ್ಟೆಯಲ್ಲಿ ಕ್ವಿಂಟಾಲ್ ರಾಗಿಗೆ 1600 ರಿಂದ 1800 ರೂಪಾಯಿಗಳಿದ್ದು ಇದೀಗ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ರಾಗಿಗೆ 3,377 ರೂಪಾಯಿ ನೀಡಲಾಗುತ್ತದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲೂ ಕಮಾಲ್ ಮಾಡುತ್ತಾ ಆಪ್…? ವೇದಿಕೆ ರೂಪಿಸಲು ಬೆಂಗಳೂರಿಗೆ ಬಂದ ಕೇಜ್ರಿವಾಲ್
ಈ ಹಿಂದೆ ಕೇಂದ್ರ ಸರ್ಕಾರ, ಕನಿಷ್ಠ ಬೆಂಬಲ ಯೋಜನೆಯಡಿ ಕ್ವಿಂಟಾಲ್ ರಾಗಿಗೆ 3,377 ರೂಪಾಯಿಗಳ ದರದಲ್ಲಿ ಖರೀದಿ ಮಾಡಲಾಗಿತ್ತಾದರೂ ನಿಗದಿತ ಗುರಿ 2.10 ಲಕ್ಷ ಮೆಟ್ರಿಕ್ ಟನ್ ತಲುಪಿದ ಕಾರಣ ಮಾರ್ಚ್ 30ರಿಂದ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಅದರೆ ಮೈಸೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆದಿದ್ದ ಕಾರಣ ಇದೀಗ ರಾಜ್ಯ ಸರ್ಕಾರ, ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಖರೀದಿಗೆ ಮುಂದಾಗಿದೆ.