ರಾಜ್ಯದಲ್ಲಿ ಈ ಬಾರಿ ರಾಗಿ ಬೆಳೆ ಉತ್ತಮವಾಗಿದ್ದು, ಆದರೆ ಬೆಂಬಲ ಬೆಲೆ ಯೋಜನೆಯಡಿ ಇದನ್ನು ಮಾರಾಟ ಮಾಡಲು ಮುಂದಾಗಿದ್ದ ರೈತರಿಗೆ ಅವಧಿ ಮುಗಿದಿದ್ದ ಕಾರಣ ನಿರಾಸೆಯಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಬೆಂಬಲ ಬೆಲೆ ಯೋಜನೆಯಡಿ 2 ಲಕ್ಷ ಟನ್ ರಾಗಿಯನ್ನು ಹೆಚ್ಚುವರಿಯಾಗಿ ಖರೀದಿ ಮಾಡಲು ತೀರ್ಮಾನಿಸಲಾಗಿತ್ತು.
ಇದರ ನೋಂದಣಿ ಇಂದಿನಿಂದಲೇ ಆರಂಭವಾಗಿದ್ದು, ರಾಗಿ ಬೆಳೆದ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.