ರಾಖಿ ಸಾವಂತ್ ಒಂದಿಲ್ಲೊಂದು ಕಾರಣದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿ ಇದ್ದೇ ಇರ್ತಾರೆ. ಈ ಬಾರಿ ಅವರು ತಮ್ಮ ಡೆನಿಮ್ ಡ್ರೆಸ್ನ ಮೂಲಕ ಸುದ್ದಿಯಾಗಿದ್ದಾರೆ.
ರಾಖಿ ಸಾವಂತ್ ಡೇನಿಮ್ ಕ್ರಾಪ್ ಟಾಪ್, ಜಾಕೆಟ್ ಹಾಗೂ ಶಾರ್ಟ್ಸ್ನಲ್ಲಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡರು. ಮುಂಬೈ ಮೂಲದ ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ಈ ಔಟ್ಫಿಟ್ನಲ್ಲಿ ರಾಖಿ ಸಾವಂತ್ ಕ್ಯಾಮರಾಗಳಿಗೆ ಪೋಸ್ ನೀಡುತ್ತಿರುವ ಬಗ್ಗೆ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ ರಾಖಿ ಸಾವಂತ್ ಈ ಉಡುಪನ್ನು ಕಂಡು ಮೂಗುಮುರಿದಿದ್ದಾರೆ.
ರಾಖಿ ಧರಿಸಿರುವ ಕ್ರಾಪ್ ಟಾಪ್ ಡೇನಿಮ್ನಿಂದ ಮಾಡಲ್ಪಟ್ಟಿದ್ದು ಅಗಲವಾದ ನೆಕ್ ಹೊಂದಿದೆ. ಹಾಗೂ ಕ್ರಾಪ್ ಟಾಪ್ನಲ್ಲಿ ಡಿಸೈನ್ ಇರೋದನ್ನು ನೀವು ಕಾಣಬಹುದಾಗಿದೆ. ಈ ಔಟ್ಫಿಟ್ನಲ್ಲಿ ರಾಖಿ ಕತ್ತು ಹಾಗೂ ಹೊಟ್ಟೆಯ ಮೇಲಿರುವ ಟ್ಯಾಟೂ ಸ್ಪಷ್ಟವಾಗಿ ಕಾಣುತ್ತಿರೋದನ್ನು ನೀವು ನೋಡಬಹುದಾಗಿದೆ.
ಆದರೆ ನೆಟ್ಟಿಗರು ಮಾತ್ರ ರಾಖಿ ಸಾವಂತ್ರ ಈ ಅವತಾರವನ್ನೂ ಪ್ರಶಂಸಿದಂತೆ ಕಂಡು ಬರಲಿಲ್ಲ. ಇದೆಂತಾ ಕೆಟ್ಟ ಧಿರಿಸು ಅಂತಾ ಒಬ್ಬರು ಹೇಳಿದ್ದರೆ ಇನ್ನೂ ಹಲವು ಈ ಧಿರಿಸಿನಲ್ಲಿ ರಾಖಿ ಅಸಹ್ಯವಾಗಿ ಕಾಣ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
https://youtu.be/f8nIeTmkCJU