
ಹೌದು, ಸದ್ದಿಲ್ಲದೆ ಈ ನಟ ವಿದೇಶಕ್ಕೆ ಹೋಗಿ ಬಂದಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಚಾರ್ಟೆಡ್ ಫ್ಲೈಟ್‌ನಲ್ಲಿ ರಾಕಿಭಾಯ್ ಥಾಯ್ಲೆಂಡ್‌ಗೆ ಹೋಗಿದ್ದರಂತೆ. ಯಶ್ ವಿದೇಶಕ್ಕೆ ಹೋಗಿ ಬಂದದ್ದು ಯಾರಿಗೂ ಗೊತ್ತಾಗಿಲ್ಲ. ಆದರೆ ಇತ್ತೀಚೆಗೆ ಕುಟುಂಬ ಸಮೇತ ದುಬೈನಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡರು. ಕುಟುಂಬವನ್ನು ಕರ್ನಾಟಕಕ್ಕೆ ವಾಪಸ್ ಕಳಿಸಿದ ನಂತರ ಒಬ್ಭರೇ ಥಾಯ್ಲೆಂಡ್ ಗೆ ಹೋಗಿದ್ದರಂತೆ. ಏಕಾಂಗಿಯಾಗಿ ಚಾರ್ಟೆಡ್ ಫ್ಲೈಟ್‌ನಲ್ಲಿ ವಾಪಸ್ ಕರ್ನಾಟಕಕ್ಕೆ ಬಂದಿದ್ದಾರೆ.
ಈ ಬೆಳವಣಿಗೆಗಳು ಆದಾಗಿನಿಂದ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿದೆ. ಹುಟ್ಟು ಹಬ್ಬಕ್ಕೆ ದುಬೈಗೆ ಹಾರಿದ್ದ ರಾಕಿ ಭಾಯ್ ಥಾಯ್ಲೆಂಡ್‌ಗೆ ಏಕೆ ಹೋಗಿರಬಹುದು ಎಂದು ಚರ್ಚೆ ಶುರುವಾಗಿದೆ. ಅದೇನೇ ಇರಲಿ ಅವರು ಯಾವುದೇ ಸಿನಿಮಾದಲ್ಲಿ ನಟಿಸಲಿ ಆದಷ್ಟು ಬೇಗ ತೆರೆ ಮೇಲೆ ಅವರು ಬರಲಿ ಅಂತಿದ್ದಾರೆ ಅಭಿಮಾನಿಗಳು.