
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ರಷ್ಯಾದ ಪಡೆಗಳು ಕೈವ್ ಬಳಿಯ ಹೆದ್ದಾರಿಯಲ್ಲಿ ಮೈನ್ ಗಳನ್ನು ಹಾಕಿದ್ದರು. ಇದನ್ನು ನಿಧಾನವಾಗಿ ಚಾಣಾಕ್ಷತನದಿಂದ ವಾಹನ ಚಾಲಕರು ದಾಟಿ ಮುಂದೆ ಸಾಗಿದ್ದಾರೆ.
ಮೂರು ಕಾರುಗಳು ಬಹಳ ನಿಧಾನವಾಗಿ ಮೈನ್ ಗಳನ್ನು ದಾಟಿ ಮುಂದೆ ಸಾಗಿವೆ. ಒಬ್ಬ ಚಾಲಕ ತನ್ನ ವಾಹನದ ಹಿಂದೆ ಜೋಡಿಸಲಾದ ಗಾಡಿಯನ್ನು ನಿರ್ಭಯವಾಗಿ ಎಳೆದುಕೊಂಡು ಹೋಗಿದ್ದಾನೆ.
ಇದನ್ನು ವಾಹನಗಳನ್ನು ಸ್ಫೋಟಿಸಲು ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ. ಇಂತಹ ಮೈನ್ ಗಳು ಭೂಮಿಯನ್ನು ಕೃಷಿಗೆ ಸೂಕ್ತವಲ್ಲದಂತೆ ಮಾಡುತ್ತದೆ. ಹಾಗೂ ಅನೇಕ ಸಾವು-ನೋವುಗಳನ್ನು ಉಂಟುಮಾಡುತ್ತವೆ. ಧ್ವಂಸಗೊಂಡ ಉಕ್ರೇನಿಯನ್ ನಗರವಾದ ಮಾರಿಯುಪೋಲ್‌ನಿಂದ ಸ್ಥಳಾಂತರಿಸುವ ಮಾರ್ಗವನ್ನು ರೂಪಿಸಲು ರಷ್ಯಾ ನೆಲಬಾಂಬ್‌ಗಳನ್ನು ಬಳಸಿದೆ.
1997 ರ ವಿಶ್ವಸಂಸ್ಥೆಯ ಮೈನ್ ಬ್ಯಾನ್ ಒಪ್ಪಂದದ ಕಾರಣದಿಂದಾಗಿ ಅನೇಕ ಮೈನ್‍ಗಳನ್ನು ನಿಷೇಧಿಸಲಾಗಿದೆ. ಇದು ಆಂಟಿ-ಪರ್ಸನಲ್ ಮೈನ್ ಗಳ ಬಳಕೆ, ಸಂಗ್ರಹಣೆ, ಉತ್ಪಾದನೆಯನ್ನು ನಿಷೇಧಿಸುತ್ತದೆ. ಆದರೆ, ರಷ್ಯಾ ಮತ್ತು ಅಮೆರಿಕಾ 1997ರ ಅಂತಾರಾಷ್ಟ್ರೀಯ ಗಣಿ ನಿಷೇಧ ಒಪ್ಪಂದಕ್ಕೆ ಒಪ್ಪಲಿಲ್ಲ. ಆದರೆ, ಉಕ್ರೇನ್ 1999 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು.