ಅನೇಕ ಬಾರಿ ರಸ್ತೆಯಲ್ಲಿ ಹಣ ಕಾಣಿಸುತ್ತದೆ. ಕೆಲವರು ಈ ಹಣವನ್ನು ಎತ್ತಿಕೊಂಡ್ರೆ ಮತ್ತೆ ಕೆಲವರು ತೆಗೆದುಕೊಳ್ಳದೆ ಮುಂದೆ ಹೋಗ್ತಾರೆ. ಇನ್ನು ಕೆಲವರು ಅದನ್ನು ದೇವರ ಹುಂಡಿಗೆ ಅಥವಾ ಬಡವರಿಗೆ ದಾನ ಮಾಡ್ತಾರೆ. ಹಿಂದೂ ಧರ್ಮದಲ್ಲಿ ಧನ ಲಕ್ಷ್ಮಿಯ ಸಂಕೇತ. ಹಾಗಾಗಿ ದಾರಿಯಲ್ಲಿ ಬಿದ್ದ ಹಣವನ್ನು ಎತ್ತಿಕೊಳ್ಳದೆ ಮುಂದೆ ಹೋಗಬಾರದು.
ಮನೆಯಿಂದ ಹೊರಗೆ ಹೊರಟಾಗ, ಮನೆಗೆ ಬರುವಾಗ ಸಿಗುವ ಹಣಕ್ಕೆ ಬೇರೆ ಬೇರೆ ಅರ್ಥವಿದೆ. ಹಾಗೆ ನೋಟು, ನಾಣ್ಯಕ್ಕೂ ಬೇರೆ ಬೇರೆ ಅರ್ಥವನ್ನು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಕಚೇರಿಗೆ ಹೋಗುವ ವೇಳೆ ಹಣ ಸಿಕ್ಕರೆ ಅದನ್ನು ಕೆಲಸ ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಇದನ್ನು ಖರ್ಚು ಮಾಡಬಾರದು.
ಮನೆಗೆ ಬರುವ ವೇಳೆ ಹಣ ಸಿಕ್ಕರೆ ಅದನ್ನು ಮನೆಗೆ ತರಬೇಕು. ಮನೆಯಲ್ಲಿ ನೀವು ಸೇವಿಂಗ್ ಮಾಡಿದ ಹಣದ ಜೊತೆ ಇದನ್ನು ಇಡಬೇಡಿ. ದಾರಿಯಲ್ಲಿ ಸಿಕ್ಕ ಹಣವಾಗಿರುವ ಕಾರಣ ಖರ್ಚು ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಹಣವನ್ನು ಡೈರಿ ಅಥವಾ ಲಕೋಟೆಯಲ್ಲಿ ಇಡಬೇಕು. ಹೀಗೆ ಮಾಡಿದ್ರೆ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ.