ಇಂದಿನ ಯಾಂತ್ರಿಕೃತ ಬದುಕಿನಲ್ಲಿ ಪ್ರಾಮಾಣಿಕತೆ, ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಆಗಾಗ್ಗೆ ನಿದರ್ಶನಗಳು ಸಿಗುತ್ತಿರುತ್ತವೆ. ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.
ಪಿಗ್ಮಿ ಸಂಗ್ರಾಹಕರೊಬ್ಬರು ದಾರಿಯಲ್ಲಿ ತಮಗೆ ಸಿಕ್ಕ 15, 000 ರೂ.ಗಳನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಇಂಥದೊಂದು ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ದೇಮ್ಲಾಪುರದ ರೈತ ರವಿಗೌಡ ಎಂಬವರು ತಾವು ತಂದಿದ್ದ 30,000 ರೂ. ಗಳ ಪೈಕಿ 15 ಸಾವಿರವನ್ನು ಹೆಚ್.ಡಿ.ಎಫ್.ಸಿ. ಬ್ಯಾಂಕ್ ಗೆ ಕಟ್ಟಿ ಉಳಿದ ಹಣವನ್ನು ಜೇಬಿಗೆ ಹಾಕಿಕೊಳ್ಳುವಾಗ ಬೀಳಿಸಿಕೊಂಡಿದ್ದರು.
ಈ ಹಣ ಶಿಕ್ಷಕರ ಸೌಹಾರ್ದ ಸಹಕಾರಿಯ ಪಿಗ್ಮಿ ಸಂಗ್ರಾಹಕ ಉದಯ ಕುಮಾರ್ ಅವರಿಗೆ ಸಿಕ್ಕಿದ್ದು, ಅವರು ಎಚ್ ಡಿ ಎಫ್ ಸಿ ಬ್ಯಾಂಕ್ ಮ್ಯಾನೇಜರ್ ಗಮನಕ್ಕೆ ತಂದಿದ್ದಾರೆ. ಸಿಸಿ ಟಿವಿ ಪರಿಶೀಲಿಸಿದ ವೇಳೆ ರವಿಗೌಡ ಹಣ ಬೀಳಿಸಿಕೊಂಡಿರುವುದು ಗಮನಕ್ಕೆ ಬಂದಿದ್ದು, ಇದೀಗ ಅವರಿಗೆ 15,000 ರೂ. ಗಳನ್ನು ಹಿಂದಿರುಗಿಸಲಾಗಿದೆ.