ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಹಲವರು ಬಲಿಯಾಗುತ್ತಿದ್ದರೂ ಬಿಬಿಎಂಪಿಯಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಇನ್ನೂ ಎಚ್ಚೆತ್ತುಕೊಂಡಿಲ್ಲ.
ಇಲ್ಲೋರ್ವ ಮಹಿಳೆ ತಮ್ಮ ಪತಿ ಮಲ್ಲೇಶ್ವರಂ ಬಳಿಯ ರಸ್ತೆ ಗುಂಡಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ತಾವೇ ಸ್ವತಃ ರಸ್ತೆ ಗುಂಡಿಯನ್ನು ಮುಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿ ಬಸ್ ಸ್ಟ್ಯಾಂಡ್ ಬಳಿ ಇಂದು ಮುಂಜಾನೆ ನನ್ನ ಪತಿ ಬೈಕ್ ನಲ್ಲಿ ಬರುವಾಗ ರಸ್ತೆಗುಂಡಿಯಿಂದ ಸ್ವಲ್ಪದರಲ್ಲಿ ಬಚಾವಾಗಿದ್ದಾರೆ. ಆ ರಸ್ತೆ ಗುಂಡಿಗಳನ್ನು ಈಗ ನಾವೇ ಹೋಗಿ ಕಲ್ಲು, ಮಣ್ಣುಗಳಿಂದ ಮುಚ್ಚಿದ್ದೇವೆ. ಇನ್ನಾದರೂ ಅವ್ಯವಸ್ಥೆಯನ್ನು ಸರಿಪಡಿಸಲಿ ಎಂದು ನಾಗಮಣಿ ಮುನಿಯಪ್ಪ ಒತ್ತಾಯಿಸಿದ್ದಾರೆ.