ಮಾರುತಿ ಸುಜುಕಿ ಕಂಪನಿಯ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಎಸ್‌ಯುವಿ ಎನಿಸಿಕೊಂಡಿರೋ ಗ್ರ್ಯಾಂಡ್ ವಿಟಾರಾದ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿ ಆರಂಭಿಕ ಬೆಲೆ 12.85 ಲಕ್ಷ ರೂಪಾಯಿ. ಕೇವಲ ಎರಡು ರೂಪಾಂತರಗಳಲ್ಲಿ ಇದು ಲಭ್ಯವಿದೆ – ಡೆಲ್ಟಾ (MT) ಮತ್ತು ಝೀಟಾ (MT). ಈ ಎರಡೂ ರೂಪಾಂತರಗಳು ಜನ್ ಕೆ-ಸರಣಿ 1.5-ಲೀಟರ್, ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್‌ನಿಂದ ಚಾಲಿತವಾಗಿವೆ.
ಈ ಎಂಜಿನ್ ಘಟಕದಲ್ಲಿ CNG ಕಿಟ್ ಅನ್ನು ನೀಡಲಾಗಿದೆ. CNGಯಲ್ಲಿ ಇದು 64.6kW@5500rpm ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. CNG ಮೋಡ್‌ನಲ್ಲಿ ಗರಿಷ್ಠ 121.5 Nm @ 4200rpm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿಯನ್ನು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ. ಕೆ-ಸೀರೀಸ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಸಹ 6-ಸ್ಪೀಡ್ ಎಎಮ್‌ಟಿಯೊಂದಿಗೆ ಲಭ್ಯವಿದೆ. ಗ್ರಾಂಡ್ ವಿಟಾರಾ ಸಿಎನ್‌ಜಿ 26.6 ಕಿಮೀ ಮೈಲೇಜ್ ನೀಡಬಲ್ಲದು. ಸಿಎನ್‌ಜಿ ರೂಪಾಂತರದಲ್ಲಿ 6 ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ.
ಇದು 6 ಏರ್‌ಬ್ಯಾಗ್ ರೂಪಾಂತರಗಳಲ್ಲಿ ಬರುತ್ತಿರುವ ದೇಶದ ಏಕೈಕ ಪ್ರೀಮಿಯಂ CNG SUV ಎನಿಸಿಕೊಂಡಿದೆ. ಸ್ಮಾರ್ಟ್‌ಪ್ಲೇ ಪ್ರೊ + ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಇನ್-ಬಿಲ್ಟ್ ನೆಕ್ಸ್ಟ್-ಜೆ ನ್ ಸುಜುಕಿ ಕನೆಕ್ಟ್‌ನಂತಹ ಅನೇಕ ಫೀಚರ್‌ಗಳು ಈ ಕಾರಿನಲ್ಲಿವೆ. ಗ್ರ್ಯಾಂಡ್ ವಿಟಾರಾ, 2022ರ ಸೆಪ್ಟೆಂಬರ್‌ನಲ್ಲಿ ಲಾಂಚ್ ಆಗಿತ್ತು. ಆಗಿನಿಂದ್ಲೇ ಗ್ರಾಹಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. S-CNG ಆಯ್ಕೆಯು ಗ್ರ್ಯಾಂಡ್ ವಿಟಾರಾದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮಾರುತಿ ಸದ್ಯ 14 CNG ಮಾದರಿಗಳನ್ನು ಹೊಂದಿದೆ.