ಕೀವ್: ಕಳೆದ ನಾಲ್ಕು ದಿನಗಳಿಂದ ಭೀಕರ ದಾಳಿ ನಡೆಸುತ್ತಿರುವ ರಷ್ಯಾ ಸೇನೆ ಹಿಮ್ಮೆಟ್ಟಿಸಲು ಪುಟ್ಟ ರಾಷ್ಟ್ರ ಉಕ್ರೇನ್ ಪ್ರಬಲ ಹೋರಾಟ ನಡೆಸಿದೆ. ಉಕ್ರೇನ್ ಮಿಲಿಟರಿ ಪಡೆ ಮಾತ್ರವಲ್ಲ, ನಾಗರಿಕರು ಕೂಡ ರಷ್ಯಾ ವಿರುದ್ಧ ಶಸ್ತ್ರಾಸ್ರಗಳನ್ನು ಹಿಡಿದು ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಉಕ್ರೇನ್ ಕಟ್ಟಡಗಳು, ರಸ್ತೆಗಳ ನಿರ್ವಹಣೆ ಉಸ್ತುವಾರಿ ಕಂಪನಿಯೊಂದು ರಷ್ಯಾ ಸೇನೆ ದಾರಿ ತಪ್ಪಿಸುವ ಮೂಲಕ ತನ್ನದೇ ವಿಶಿಷ್ಟ ರೀತಿಯಲ್ಲಿ ಹೋರಾಟ ನಡೆಸಿದೆ.
ಉಕ್ರಾವ್ಟೋಡರ್ ಎಂಬ ಸರ್ಕಾರಿ ಕಂಪನಿ ಉಕ್ರೇನ್ ರಸ್ತೆ ಮಾರ್ಗಗಳಲ್ಲಿ ಅಳವಡಿಸಲಾಗಿರುವ ರಸ್ತೆ ಸೂಚನಾ ಫಲಕಗಳನ್ನು, ಸಂಕೇತಗಳನ್ನು ತೆಗೆದುಹಾಕಿದೆ. ರಷ್ಯಾ ಸೈನಿಕರು ಈ ಸೂಚನಾ ಫಲಕಗಳಿಂದಲೇ ಉಕ್ರೇನ್ ದಾರಿಗಳ ಬಗ್ಗೆ ಅರಿತುಕೊಳ್ಳುವ ಸಾಧ್ಯತೆ ಇರುವುದರಿಂದ ಶತ್ರುಗಳ ದಾರಿ ತಪ್ಪಿಸಲೆಂದು ರಸ್ತೆಯಲ್ಲಿನ ಬೋರ್ಡ್ ಗಳನ್ನು, ನಾಮಫಲಕಗಳನ್ನು ತೆಗೆಯಲಾಗಿದೆ ಎಂದು ತಿಳಿಸಿದೆ.
BIG NEWS: BJP ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಟ್ವಿಟರ್ ಖಾತೆ ಹ್ಯಾಕ್; ಕಿಡಿಗೇಡಿಗಳು ಮಾಡಿದ ಪೋಸ್ಟ್ ಏನು…..?
ರಷ್ಯಾ ಸೇನೆಗೆ ಸರಿಯಾಗಿ ಇಲ್ಲಿನ ಭಾಷೆಯೂ ಬಾರದಿರುವುದರಿಂದ ಅವರು ಸೀದಾ ನರಕಕ್ಕೆ ಹೋಗಲು ಸಹಾಯ ಮಾಡುತ್ತೇವೆ. ನಮ್ಮ ಜತೆ ಸಾರ್ವಜನಿಕರು, ಸ್ಥಳೀಯರು ಕೈ ಜೋಡಿಸಬೇಕು. ರಷ್ಯನ್ ಸೈನಿಕರಿಗೆ ದಿಕ್ಕು ಕಾಣದಂತಾಗಿ ಕಂಗಾಲಾಗಿ ಪಲಾಯನಗೊಳ್ಳುವಂತೆ ಮಾಡಬೇಕು ಎಂದು ಫೇಸ್ ಬುಕ್ ನಲ್ಲಿ ಕಂಪನಿ ಕರೆ ನೀಡಿದೆ.