ರಷ್ಯಾದ ವಿರುದ್ಧ ಹೋರಾಡಲು ಉಕ್ರೇನಿಯನ್ ಯುವತಿ ತನ್ನ ತಾಯ್ನಾಡಿಗೆ ಹಿಂತಿರುಗುವ ಮುನ್ನು ತಾನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಿದ್ದಾಳೆ. ಬಳಿಕ ತನ್ನ ತಾಯ್ನಾಡಿನ ರಕ್ಷಣೆಗೆ ಧಾವಿಸಿರೋ ಹೃದಯಸ್ಪರ್ಶಿ ಘಟನೆ ನಡೆದಿದೆ.
ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದಾಗ, ಮಾರಿಯಾ ಎಂಬ ಯುವತಿ ತನ್ನ ತಾಯ್ನಾಡನ್ನು ರಕ್ಷಿಸಲು ಅಳಿಲು ಸೇವೆ ಮಾಡಲು ನಿರ್ಧರಿಸಿದ್ದಾಳೆ. ತನ್ನ ನಿಶ್ಚಿತ ವರ ಡೇವಿಡ್ ನನ್ನು ಚಿಕಾಗೋದಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ಮಾರಿಯಾ ವಿವಾಹವಾಗಿದ್ದಾಳೆ. ನಂತರ ತನ್ನ ತಾಯ್ನಾಡಿನ ರಕ್ಷಣೆಗೆ ತೆರಳಿದ ಆಕೆ ಪೋಲಂಡ್ ಗೆ ಪಯಣಿಸಲು ಯೋಜಿಸಿದ್ದಾಳೆ. ನಂತರ ಅಲ್ಲಿಂದ ಉಕ್ರೇನ್ ಗಡಿಯನ್ನು ದಾಟಿ, ಅಂತಿಮವಾಗಿ ತನ್ನ ತಾಯ್ನಾಡಿನಲ್ಲಿ ಹೋರಾಡಲು ಸ್ವಯಂಸೇವಕಿಯಾಗುವ ಗುರಿಯನ್ನು ಆಕೆ ಹೊಂದಿದ್ದಾಳೆ.
ಮಾರಿಯಾ ಮದುವೆಯಲ್ಲಿ ಪಾಲ್ಗೊಂಡಿದ್ದ ಸ್ನೇಹಿತ ಲೊಂಬಾರ್ಡ್‌ನ ಪಮೇಲಾ ಚಿಂಚಿಲ್ಲಾ, ಜನರು ಅಲ್ಲಿಂದ ಹೆದರಿ ಓಡಿಹೋಗುತ್ತಿದ್ದಾರೆ. ಆದರೆ ಮಾರಿಯಾ ಅಲ್ಲಿಗೆ ಓಡುತ್ತಿದ್ದಾಳೆ ಎಂದು ಹೇಳಿದ್ದಾರೆ. ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು ಉಕ್ರೇನ್‌ಗೆ ಕೊಂಡೊಯ್ಯಲು ಮಾರಿಯಾಗೆ ವೈದ್ಯಕೀಯ ಸಾಮಗ್ರಿಗಳು, ಮಾಸ್ಕ್ ಗಳು ಮತ್ತು ಇತರ ವಸ್ತುಗಳನ್ನು ತಂದಿದ್ದರು.
ಮಾರಿಯಾ ಕುಟುಂಬವು ತನ್ನ ಪೋಷಕರೊಂದಿಗೆ ಪೋಲೆಂಡ್‌ಗೆ ಸ್ಥಳಾಂತರಗೊಂಡ 1991 ರವರೆಗೆ ಕೈವ್‌ನಲ್ಲಿ ವಾಸಿಸುತ್ತಿದ್ದರು.