ನಮ್ಮ ದೇಶಕ್ಕೆ ಈ ಮಟ್ಟಿಗೆ ಹಾನಿ ಮಾಡಿದ ರಷ್ಯಾವು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಬೆಲೆ ತೆರುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ನ ಪ್ರಮುಖ ನಗರಗಳ ಮೇಲೆ ರಷ್ಯಾದ ಕ್ಷಿಪಣಿ ಹಾಗೂ ಬಾಂಬ್ ದಾಳಿಗಳನ್ನು ಖಂಡಿಸಿ ವೊಲೊಡಿಮಿರ್ ಈ ಹೇಳಿಕೆಯನ್ನು ನೀಡಿದ್ದಾರೆ.
ಈ ಯುದ್ಧದ ಬಳಿಕ ದೇಶವನ್ನು ಪುನಃ ಕಟ್ಟಲು ನಾನು ಶ್ರಮಿಸುತ್ತೇನೆ. ರಷ್ಯಾವು ಸಂಪೂರ್ಣವಾಗಿ ಉಕ್ರೇನ್ನ್ನು ಕಟ್ಟಿಹಾಕಲು ಮುಂದಾದರೆ ನಮ್ಮ ಪ್ರತಿರೋಧದ ಹಂತಗಳು ಮುಂದೆ ಬರಲಿವೆ. ನಮ್ಮ ಸ್ವತಂತ್ರವನ್ನು ಹೊರತುಪಡಿಸಿ ನಮಗೆ ಕಳೆದುಕೊಳ್ಳಲು ಏನೂ ಇಲ್ಲ ಎಂದು ಹೇಳಿದರು.
ನಾವು ಪ್ರತಿಯೊಂದು ಮನೆ, ಬೀದಿ, ನಗರಗಳನ್ನು ಪುನಃ ಕಟ್ಟುತ್ತೇವೆ. ನಮ್ಮ ದೇಶದ ವಿರುದ್ಧ, ಉಕ್ರೇನ್ನ ಪ್ರತಿಯೊಬ್ಬ ಪ್ರಜೆಯ ವಿರುದ್ಧ ನೀವು ಕೈಗೊಂಡ ಕಾರ್ಯಕ್ಕೆ ಖಂಡಿತವಾಗಿಯೂ ಬೆಲೆ ತೆರುತ್ತೀರಿ ಎಂದು ವೊಲೊಡಿಮಿರ್ ರಷ್ಯಾಗೆ ಹೇಳಿದರು.